ಗದಗ: ವಯಸ್ಸು, ಸಂಪತ್ತು ಮತ್ತು ಅಧಿಕಾರ ಇತ್ತೆಂದರೆ ಮನುಷ್ಯನಿಗೆ ಮದ ಬಂದಂತೆ ಆಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಲಂಚ ಮಂಚದ ಹೇಳಿಕೆ ವಿಚಾರವಾಗಿ ಗದಗನಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ತಿರುಗೇಟು ನೀಡಿದ್ದಾರೆ.
ವಯಸ್ಸು, ಸಂಪತ್ತು, ಮನುಷ್ಯನಿಗೆ ಬಹಳ ಕೆಟ್ಟದ್ದು. ಮೊದಲು ಹೈದ್ರಾಬಾದ್ ಕರ್ನಾಟಕಕ್ಕೆ ಹಿಂದುಳಿದ ಪ್ರದೇಶ ಅಂತ ಹಣೆಪಟ್ಟಿ ಕಟ್ಟಿದ್ರು. ಆ ಜನ್ರಿಗೆ ನೋವು ಆಗಬಾರದೆಂದು ಬಿ.ಎಸ್.ವೈ ಕಲ್ಯಾಣ ಕರ್ನಾಟಕ ಮಾಡಿದ್ರು.ಕಲ್ಯಾಣ ಕರ್ನಾಟಕ ಇಷ್ಟು ದಿನ ಪ್ರತಿನಿಧಿಸಿದವರು ಯಾರು? ಮಲ್ಲಿಕಾರ್ಜುನ ಖರ್ಗೆ ಹಾಗೂ ದಿವಂಗತ ಧರ್ಮಸಿಂಗ್ ಪ್ರತಿನಿಧಿಸಿದ್ದಾರೆ.ಆದರೆ ಆ ಭಾಗದ ರಸ್ತೆ, ಇತರೆ ಅಭಿವೃದ್ಧಿ ಎಷ್ಟಾಗಿದೆ ನೋಡ್ರಿ, ಎಷ್ಟು ಖರ್ಚು ಆಗಿದೆ ನೋಡಲಿ, ಆ ಹಣ ಎಲ್ಲಿ ಹೋಯಿತು? ಎಂದು ಪ್ರಶ್ನಿಸಿದರು.
ಮಹಿಳೆಯರು ಸರ್ಕಾರಿ ನೌಕರಿ ಸೇರುವ ಬಗ್ಗೆ ಮಾತನಾಡುವುದು ಎಷ್ಟು ಸರಿ?ಸಾವಿರಾರು ಮಹಿಳೆಯರು ಐಎಎಸ್, ಐಪಿಎಸ್, ಕೆಎಎಸ್, ಮಿಲಿಟರಿ ನಲ್ಲಿದ್ದಾರೆ. ಪ್ರಿಯಾಂಕ ಅವರದ್ದು ನಾಲಿಗೆನಾ? ಅಥವಾ ಮತ್ತೆನು? ಎಂದು ಕಿಡಿಕಾರಿದ ಪಾಟೀಲ, ಕಾಂಗ್ರೆಸ್ ನ ಮೂಲ ಪಿತಾಮಹರ ಫೋಟೋ ಎಂತಹವಿದೆ ಅಂತ ತಿರುಗಿ ನೋಡಲಿ.
ಮೂಲ ಪಿತಾಮಹರ ಬಗ್ಗೆ ಸಾಕಷ್ಟು ವಾಟ್ಸಪ್, ಸೊಶಿಯಲ್ ಮಿಡಿಯಾದಲ್ಲಿ ಹರಿದಾಡ್ತಿವೆ. ಸಿಗರೇಟ್ ಸೇದುವುದು, ತಬ್ಬಿಕೊಳ್ಳುವ ಚಿತ್ರಗಳು ಜಾಲತಾಣದಲ್ಲಿ ಹರಿದಾಡ್ತಿವೆ.
ತಮ್ಮ ಬಳುವಳಿ ಬೇರೆ ಅವರ ಮೇಲೆ ಹಾಕ್ತಾರೆ.ಕಾಂಗ್ರೆಸ್ ಇತಿಹಾಸ ಕೆದಕಿದರೆ ಕಾಂಗ್ರೆಸ್ ಬೆತ್ತಲಾಗುತ್ತದೆ. ಖರ್ಗೆ ಕ್ಷಮೆ ಕೇಳಲ್ಲಾ ಅಂದ್ರೆ ನಾಚಿಕೆ ಇಲ್ಲದವ ಎಂದರ್ಥ ಎಂದು ಪ್ರಿಯಾಂಕ್ ಖರ್ಗೆಗೆ ಸಚಿವ ಸಿ.ಸಿ ಪಾಟೀಲ ಟಾಂಗ್ ನೀಡಿದ್ರು.
PublicNext
14/08/2022 03:43 pm