ತುಮಕೂರು: ಮುಂದಿನ ಚುನಾವಣೆಗೆ ಮತದಾರರನ್ನು ಸೆಳೆಯಲು ಈಗಿನಿಂದಲೇ ಕಸರತ್ತು ಆರಂಭಿಸಿರುವ ಮಾಜಿ ಶಾಸಕ ಬಿ. ಸುರೇಶ್ ಗೌಡ ಮತ್ತೊಮ್ಮೆ ಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮಾಂತರ ಶಾಸಕ ಗೌರಿಶಂಕರ್ ಗೆ ಮತ ಕೇಳಲು ಯಾವುದೇ ವಿಚಾರ ಇಲ್ಲ. ತಮ್ಮ ಕಾಲೇಜಿನಲ್ಲಿ ಮಕ್ಕಳಿಗೆ ಸೀಟ್ ಕೊಡಿಸ್ತಿನಿ ಎಂದು ಒಂದೂ ಸೀಟ್ ಕೊಡಿಸಿಲ್ಲ. 10 ಸಾವಿರ ಯುವಜನರಿಗೆ ಉದ್ಯೋಗ ಕೊಡಿಸ್ತಿನಿ ಎಂದು ಹೇಳಿ ಉದ್ಯೋಗ ಕೊಡಿಸಿಲ್ಲ. ಗಾರ್ಮೆಂಟ್ಸ್ ಮಾಡಿ ಯುವತಿಯರಿಗೆ ಉದ್ಯೋಗ ಕೊಡ್ತಿನಿ ಅಂತ ಹೇಳಿ ಅದನ್ನೂ ಮಾಡಿಲ್ಲ ಎಂದು ಹರಿಹಾಯ್ದರು.
ಗೌರಿಶಂಕರ್ ಲೆಕ್ಕದಲ್ಲಿ ಅಭಿವೃದ್ಧಿ ಎಂದರೆ ಯುವಕರಿಗೆ ಎಣ್ಣೆ ಕುಡಿಸೋದು, ಮಾಂಸ ತಿನ್ನಿಸೋದು! 18ರಿಂದ 20 ವರ್ಷದ ಯುವಕರನ್ನು ದುರ್ಬಳಕೆ ಮಾಡಿಕೊಳ್ಳುತಿದ್ದಾರೆ. ಗೋವಾ ಮತ್ತು ಥೈಲ್ಯಾಂಡ್ ಗೆ ಕರೆದುಕೊಂಡು ಹೋಗಿ ಯುವಕರನ್ನು ಹಾಳು ಮಾಡುತಿದ್ದಾರೆ. ಇಂತಹ ಗೌರಿಶಂಕರ್ ಗೆ ಜನರೇ ಪಾಠ ಕಲಿಸ್ತಾರೆ ಎಂದು ಕಿಡಿ ಕಾರಿದರು.
PublicNext
08/08/2022 02:48 pm