ನವದೆಹಲಿ: ಮುಂದಿನ ಮೇ ತಿಂಗಳಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೂ ಮುನ್ನವೇ ಮಾಜಿ ಸಿಎಂ ʻಶೇಶ್ ಮಹಲ್ʼ ಬಂಗಲೆ ವಿವಾದ ತೀವ್ರಗೊಂಡಿದೆ. ಹೌದು
ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸದಾ ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಮಾಡಿರುವ ಬಿಜೆಪಿ ಇದೀಗ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಕೇಜ್ರಿವಾಲ್ ಅವರ ಬಂಗಲೆಯ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ಭ್ರಷ್ಟಾಚಾರ ಯಾವ ಮಟ್ಟಿಗೆ ನಡೆದಿದೆ ಎಂಬುದನ್ನು ಈ ವಿಡಿಯೋ ಮೂಲಕ ನೋಡಬಹುದು ಎಂದು ಹೇಳಿಕೊಂಡಿದೆ.
ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಸಾಮಾಜಿಕ ಜಾಲತಾಣ x ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದು - 'ತನ್ನನ್ನು ತಾನು ಸಾಮಾನ್ಯ ಎಂದು ಕರೆದುಕೊಳ್ಳುವ ಅರವಿಂದ್ ಕೇಜ್ರಿವಾಲ್ ಅವರ ಗಾಜಿನ ಅರಮನೆ ನೋಡಿದರೆ ನಿಜವಾಗಿಯೂ ಕೇಜ್ರಿವಾಲ್ ಸಾಮಾನ್ಯ ವ್ಯಕ್ತಿಯೇ ಎಂದು ಬರೆದಿದ್ದಾರೆ. ಸಾರ್ವಜನಿಕರ ಹಣವನ್ನು ಲೂಟಿ ಮಾಡಿದ ಕೇಜ್ರಿವಾಲ್ ಬಂಗಲೆಗೆ ಖರ್ಚು ಮಾಡಿದ ಮೊತ್ತದಿಂದ ಎಷ್ಟು ಬಡವರನ್ನು ಉಳಿಸಬಹುದಿತ್ತು, ಎಷ್ಟು ಮಂದಿಗೆ ಮನೆ ಅಥವಾ ಆಟೋ ರಿಕ್ಷಾಗಳು ನೀಡಬಹುದಿತ್ತು ಎಂದು ಹೇಳಿದ್ದಾರೆ.
ಕೇಜ್ರಿವಾಲ್ ಅಧಿಕಾರದಲ್ಲಿದ್ದ ಸಮಯದಲ್ಲಿ ಯಾವ ರೀತಿ ಭ್ರಷ್ಟಾಚಾರ ನಡೆದಿದೆ ಎಂಬುದಕ್ಕೆ ಇದೇ ಸಾಕ್ಷಿ ಈ ಬಂಗಲೆ ಯಾವ 7 ಸ್ಟಾರ್ ಹೋಟೆಲ್ ಗೂ ಕಡಿಮೆ ಇಲ್ಲ, ಅಲ್ಲದೆ ಈ ಬಂಗಲೆಗೆ ಕೇಜ್ರಿವಾಲ್ ಬರೋಬ್ಬರಿ 3.75 ಕೋಟಿ ರೂಪಾಯಿ ಖರ್ಚುಮಾಡಿದ್ದಾರೆ ಎಂದು ಹೇಳಿದ ಅವರು ಮನೆಯೊಳಗೆ ಅಳವಡಿಸಿರುವ ಎಲ್ಲ ವಸ್ತುಗಳ ಬೆಲೆಯನ್ನೂ ಹಂಚಿಕೊಂಡಿದ್ದಾರೆ.
ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ ವೀರೇಂದ್ರ ಸಚ್‌ದೇವ, 'ಮಕ್ಕಳ ಹೆಸರಿನಲ್ಲಿ ಪ್ರಮಾಣ ಮಾಡಿ ಸರ್ಕಾರಿ ಮನೆ, ವಾಹನ, ಭದ್ರತೆ ಪಡೆಯುವುದಿಲ್ಲ ಎಂದು ಸುಳ್ಳು ಭರವಸೆ ನೀಡುವವರು ದೆಹಲಿಯ ತೆರಿಗೆದಾರರ ಆದಾಯವನ್ನು ಹೇಗೆ ಲೂಟಿ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
PublicNext
11/12/2024 12:17 pm