ತುಮಕೂರು: ಬಿಜೆಪಿ ಪಕ್ಷವಾಗಲಿ ಬೇರೆ ಯಾವುದೇ ಪಕ್ಷದವರಾಗಲಿ ಜನರ ಕಷ್ಟಗಳಿಗೆ ಸ್ಪಂದಿಸುವಂತಹ ನಾಯಕನನ್ನು ಆಯ್ಕೆ ಮಾಡಿ ಎಂದು ಬೆಳ್ಳಾವಿ ಕಾರದ ಮಠದ ಕಾರದ ವೀರಬಸವ ಸ್ವಾಮೀಜಿ ತಿಳಿಸಿದರು.
ತುಮಕೂರು ತಾಲ್ಲೂಕು ಕಸಬಾ ಹೋಬಳಿಅರಕೆರೆ ಗ್ರಾಮದಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯ ಒಟ್ಟಿಗೆ ಸೇರಿ ಕೋಡಿ ಬಿದ್ದಿರುವ ಅರಕೆರೆ ಕೆರೆಗೆ ಗಂಗಾಪೂಜೆ ನೆರವೇರಿಸುವ ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಸುರೇಶ್ ಗೌಡರ ನಿಷ್ಟುರವಾದಿ ಗುಣದಿಂದ ಅವರಿಗೆ ಸ್ವಲ್ಪ ಹಿನ್ನೆಡೆಯಾಗಿದೆ.ಅದೇ ಅವರು ಸಾತ್ವಿಕ ಗುಣ ಬೆಳಸಿಕೊಂಡಿದ್ದೆ ಆದರೆ ಬರೀ ಶಾಸಕರಲ್ಲ ಮಂತ್ರಿಯಾಗುವ ಅರ್ಹತೆಯೂ ಅವರಲ್ಲಿದೆ ಎಂದರು.
ಮಾಜಿ ಶಾಸಕ ಬಿ ಸುರೇಶ್ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನೆರೆದಿದ್ದ ಹೆಣ್ಣು ಮಕ್ಕಳಿಗೆ ಸೀರೆ ಬಾಗಿನ ವಿತರಿಸಿದರು.ಕಾರ್ಯಕ್ರಮದಲ್ಲಿ ಬಿಜೆಪಿ ಮಾಜಿ ಯುವಮೋರ್ಚಾ ಅಧ್ಯಕ್ಷ ಅರಕೆರೆ ರವೀಶ್,ಅರಕೆರೆ ಗ್ರಾಮಪಂಚಾಯ್ತಿ ಅಧ್ಯಕ್ಷೆ ಸಲ್ಮಾಆರಿಪ್ ಪಾಷ,ಉಪಾಧ್ಯಕ್ಷ ನಾಗರತ್ನಮ್ಮ ಅಂಜನಮೂರ್ತಿ,ಗ್ರಾಮಪಂಚಾಯ್ತಿ ಸದಸ್ಯರಾದ ಅನಿಲ್ ಪಟೇಲ್,ಶಿವಕುಮಾರ್ ಉಪಸ್ಥಿತರಿದ್ದರು.
PublicNext
07/08/2022 04:59 pm