ಗದಗ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಗದಗ ಜಿಲ್ಲಾ ಕಾಂಗ್ರೆಸ್ ಒಂಬತ್ತು ದಿನಗಳ ಕಾಲ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ರೋಣ ತಾಲೂಕಿನ ಸರ್ಜಾಪುರ ದಿಂದ 166 ಕಿ.ಮೀಟರ್ ಪಾದಯಾತ್ರೆಯನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್ ಪಾಟೀಲರ ನೇತೃತ್ವದಲ್ಲಿ ನಡೆಸಲಾಗುತ್ತಿದೆ. ಇಂದು ಸರ್ಜಾಪುರ ಗ್ರಾಮದಲ್ಲಿ ಕೇಕ್ ಕಟ್ ಮಾಡುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಯ್ತು.
ನಂತರ ಶಾಂತಗೇರಿ, ಬಮ್ಮಸಾಗರ ಮೂಲಕ ಗದಗ ತಾಲೂಕಿನ ಕಣಗಿನಹಾಳ, ಯಕಲಾಸ್ಪುರ ಮೂಲಕ ಮುಂಡರಗಿ ತಾಲೂಕಿನ ಪೇಟಾಲೂರು ಮೂಲಕ ಡಂಬಳ ಗ್ರಾಮದಲ್ಲಿ ಅಂತ್ಯಗೊಳ್ಳಲಿದೆ.. ೯ ದಿನಗಳ ನಡೆಯುವ ಪಾದಯಾತ್ರೆಯಲ್ಲಿ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಸ್ವಾತಂತ್ರ್ಯದ ಮಹತ್ವ, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅರಿವು ಮೂಡಿಸಲಾಗುವುದು. ಪಾದಯಾತ್ರೆಯಲ್ಲಿ ಕಾಂಗ್ರೆಸ್‌ನ ಕಾರ್ಯಕರ್ತರು ಭಾಗಿಯಾಗಿದ್ದು, ವಾದ್ಯತಂಡದೊಂದಿಗೆ ಪಾದಯಾತ್ರೆ ಮುಂದುವರೆದಿದೆ.
PublicNext
05/08/2022 04:42 pm