ಚಿಕ್ಕಮಗಳೂರು : ಬಿಜೆಪಿ ನಾಯಕರೇ ನೀವು ಸರಿಯಾಗಿ ನಡೆದರೆ ಬೆನ್ನು ತಟ್ಟೋದು ಗೊತ್ತು. ದಾರಿ ತಪ್ಪಿದರೆ ಬೆನ್ನಿಗೆ ಬಾರಿಸೋದು ಗೊತ್ತು ಎನ್ನುವ ವಾಟ್ಸಾಪ್ ಸ್ಟೇಟಸ್ ಮಲೆನಾಡು ಭಾಗದಲ್ಲಿ ಭಾರೀ ಸದ್ದು ಮಾಡುತ್ತಿದೆ.ನಿಮ್ಮನ್ನು ಗೆಲ್ಲಿಸೋದು ಗೊತ್ತು. ಸೋಲಿಸೋದು ಗೊತ್ತು. ಎಂದು ಸಾಮಾಜಿಕ ಜಾಲತಾಣದಲ್ಲಿ ಹೀಗೊಂದು ಸಂದೇಶ ಹಾಕುವ ಮೂಲಕ ಹಿಂದೂ ಕಾರ್ಯಕರ್ತರು ರಾಜಕೀಯ ನಾಯಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.
ವಾಟ್ಸಾಪ್ ಸ್ಟೇಟಸ್ ಹಾಕುತ್ತಿರುವ ಮಲೆನಾಡ ಹಿಂದೂ ಕಾರ್ಯಕರ್ತರು ಬಿಜೆಪಿ ರಾಜಕೀಯ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದಾರೆ. ನಾವು ಹಿಂದೂ ಕಾರ್ಯಕರ್ತರು. ರಾಜಕೀಯವಾಗಿ ಬಿಜೆಪಿಗೆ ಮತ ನೀಡಿದ್ದೇವೆ. ಪಕ್ಷಕ್ಕಾಗಿ ಯಾವುದೇ ಲಾಭವಿಲ್ಲದೆ, ಪ್ರತಿಫಲಾಪೇಕ್ಷೆ ಇಲ್ಲದೆ ಪ್ರಚಾರ ಮಾಡುತ್ತಿದ್ದೇವೆ. ಹಾಗಾಂತ ನಾವು ಬಿಜೆಪಿ ನಾಯಕರ ಗುಲಾಮರಲ್ಲ. ನಮ್ಮ ನಿಷ್ಠೆ ಏನಿದ್ದರೂ ತತ್ವ-ಸಿದ್ಧಾಂತಕ್ಕೆ ಮಾತ್ರ ಎಂದು ಎಚ್ಚರಿಕೆ ರವಾನಿಸಿದ್ದಾರೆ.
ಮಂಗಳೂರಿನ ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆ ಬಳಿಕ ಹಿಂದೂ ಕಾರ್ಯಕರ್ತರು ಸರ್ಕಾರ ಹಾಗೂ ಬಿಜೆಪಿ ನಾಯಕರ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ.
PublicNext
29/07/2022 03:33 pm