ಬೆಂಗಳೂರು: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ಇಡಿ ವಿಚಾರಣೆ ಖಂಡಿಸಿ ಬೆಂಗಳೂರ ನಗರದ ಕಾಂಗ್ರೆಸ್ ಭವನದಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮಂಗಳವಾರ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬಂದ ನಟಿ ಭಾವನಾಗೆ ಮಹಿಳಾ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.
ಬಿಜೆಪಿಗೆ ಹೋಗಿದ್ರಿ ಈಗ ಮತ್ತೆ ಬಂದಿದ್ದೀರಾ? ಮುಂದೆ ಬಂದು ಕೂರೋದಕ್ಕೆ ಹೋಗ್ತೀರಾ ಎಂದು ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರು ನಟಿ ಭಾವನಾ ಅವರನ್ನು ತರಾಟೆ ತೆಗೆದುಕೊಂಡರು. ಇದರಿಂದ ಕೊಂಚ ಗಲಿಬಿಲಿಯಾದ ಭಾವನಾ ತರಾಟೆಗೆ ತೆಗೆದುಕೊಂಡ ಕಾರ್ಯಕರ್ತೆಯನ್ನು ಸಮಾಧಾನ ಪಡಿಸಿದರು.
ಪ್ರತಿಭಟನೆಗೆ ಬಂದ ಭಾವನಾ ಕುರ್ಚಿ ಸಿಗದೆ ಪರದಾಟ ನಡೆಸಿದರು. ಈ ವೇಳೆ ಡಿಕೆ ಶಿವಕುಮಾರ್ ಕುರ್ಚಿಯಲ್ಲಿ ಭಾವನಾ ಕೂರಲು ಹೋದಾಗ ಕಾರ್ಯಕರ್ತರು ಓಯ್ ಎಂದು ಜೋರಾಗಿ ಕೂಗಿದರು. ಕುರ್ಚಿ ಸಿಗದೆ ಪರದಾಡಿದ ನಟಿ ಭಾವನಾಗೆ ಕೊನೆಗೆ ಬೇರೆ ಕಡೆ ಕುರ್ಚಿ ವ್ಯವಸ್ಥೆ ಮಾಡಿಕೊಡಲಾಯಿತು.
PublicNext
26/07/2022 10:42 pm