ವರದಿ: ರವಿ ಕುಮಾರ್, ಕೋಲಾರ
ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಅವರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೆಸರೇಳದೆ ವಾಗ್ದಾಳಿ ನಡೆಸಿದರು.
ಯಾವ ಯಾವ ಕಾಲಘಟ್ಟದಲ್ಲಿ ಬಣ್ಣ ಬದಲಾಯಿಸಿದ್ದಾರೆ ಅನ್ನೋದು ಸಿದ್ದರಾಮಯ್ಯನವರಿಗೆ ತಿಳಿದಿದೆ. ಸಿದ್ದರಾಮಯ್ಯ ರನ್ನು ಸೋಲಿಸಲು ಇವರೆಲ್ಲಾ ಸೇರಿಕೊಂಡು ಸುಪಾರಿ ಪಡೆದಿದ್ದಾರೆ ಅನ್ನೋ ಅನುಮಾನವಿದೆ. ಇವರ ಯಾರ ಮಾತು ಕೇಳಿ ಸಿದ್ದರಾಮಯ್ಯ ಇಲ್ಲಿ ಸ್ಪರ್ಧೆ ಮಾಡೋದಿಲ್ಲ ಅಂತ ತಿಳಿಸಿದ್ರು.
ಮಾಜಿ ಸಂಸದ ಕೆ.ಎಚ್. ಮುನಿಯಪ್ಪ, ಕಾಂಗ್ರೆಸ್ ನಲ್ಲಿ ಬೇಸರಗೊಂಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸುಧಾಕರ್,ಕೆ.ಎಚ್. ಮುನಿಯಪ್ಪನವರು ಹಿರಿಯ ನಾಯಕರು. ಬಿಜೆಪಿ ಗೆ ಬಂದ್ರೆ ಸ್ವಾಗತ. ನಾನೇ ಮೊದಲು ಅವರನ್ನು ಸ್ವಾಗತ ಮಾಡುತ್ತೇನೆ ಅಂತ ತಿಳಿಸಿದ್ರು.
PublicNext
21/07/2022 08:04 pm