ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ಷೇತ್ರದಲ್ಲಿ ಹೆಚ್ಚಿದ ಕಳ್ಳತನ ಕೇಸ್ : ಶಾಸಕ ಶ್ರೀಮಂತ ಪಾಟೀಲರಿಂದ ಗೃಹ ಸಚಿವರಿಗೆ ಮನವಿ

ಕಾಗವಾಡ : ಇತ್ತೀಚಿಗೆ ಕಾಗವಾಡ ತಾಲೂಕಿನಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗಿದ್ದು ಕಳ್ಳರನ್ನು ಹಿಡಿಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಕೂಡಲೇ ಕಳ್ಳರ ಹೆಡೆಮುರಿಕಟ್ಟುವಂತೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅವರು ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಿದರು.

ಅವರು ನಿನ್ನೆ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಭೇಟಿಯಾಗಿ ಕಳೆದ ಕೆಲವು ದಿನಗಳಿಂದ ಕಾಗವಾಡ ಮತಕ್ಷೇತ್ರದ ವ್ಯಾಪ್ತಿಯಲ್ಲಿಯ ಗ್ರಾಮಗಳಲ್ಲಿ ಸರಣಿ ಮನೆ ಕಳ್ಳತನ, ಬೈಕ್ ಕಳ್ಳತನ, ಆಭರಣಗಳ ಕಳ್ಳತನ, ನದಿ ತೀರದ ಮೋಟರ್ ಪಂಪ್ಸೆಟ್ ಕಳ್ಳತನಗಳು ನಡೆಯುತ್ತಿವೆ. ಇದರಿಂದ ಕ್ಷೇತ್ರದ ಜನರು ಭಯ ಭೀತಿಗೆ ಒಳಗಾಗಿದ್ದಾರೆ, ಕ್ಷೇತ್ರದ ಹಲವು ಗ್ರಾಮದ ಸಾರ್ವಜನಿಕರು ಪೊಲೀಸ್ ಠಾಣೆಗೆ ದೂರ ಸಲ್ಲಿಸಿದರೂ ಸಹ ಪೊಲೀಸ್ ಇಲಾಖೆಯವರು ಕಳ್ಳರನ್ನು ಹಿಡಿಯಲು ವಿಫಲರಾಗಿದ್ದಾರೆ, ಆದ್ದರಿಂದ ಹಲವಾರು ಗ್ರಾಮಗಳ ಸಾರ್ವಜನಿಕರು ಈ ವಿಷಯವನ್ನು ನನ್ನ ಗಮನಕ್ಕೆ ತಂದಾಗ, ಇವತ್ತು ಗೃಹ ಸಚಿವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿ, ಕಳ್ಳತನದ ಹಾಗೂ ರೈತರ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ತಿಳಿಸಿದಾಗ ಗೃಹ ಸಚಿವರು ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆಂದು ತಿಳಿಸಿದರು.

ಈ ಸಮಯದಲ್ಲಿ ಕೆಎಂಎಫ್ ನಿರ್ದೇಶಕ ಅಪ್ಪಾಸಾಬ ಅವತಾಡೆ, ಹಿರಿಯ ರೈತ ಮುಖಂಡ ದಾದಾಗೌಡ ಪಾಟೀಲ, ರಾಜೇಂದ್ರ ಪೋತದಾರ ಸೇರಿದಂತೆ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

Edited By : Nirmala Aralikatti
PublicNext

PublicNext

18/07/2022 10:14 pm

Cinque Terre

22.97 K

Cinque Terre

0

ಸಂಬಂಧಿತ ಸುದ್ದಿ