ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಧ್ಯಪ್ರದೇಶದಲ್ಲಿಯೂ ಖಾತೆ ತೆರೆದ ಕೇಜ್ರಿವಾಲ್ ಪಕ್ಷ: ಸಿಂಗ್ರೌಲಿ ಮೇಯರ್ ಸ್ಥಾನ ಎಎಪಿ ವಶ

ಭೋಪಾಲ್: ಪಾಲಿಕೆ ಚುನಾವಣೆಯಲ್ಲಿ ಗಮನಾರ್ಹ ಪಾದಾರ್ಪಣೆಯ ಮೂಲಕ ಮಧ್ಯಪ್ರದೇಶಕ್ಕೂ ಆಮ್ ಆದ್ಮಿ ಪಕ್ಷ ತನ್ನ ಅಸ್ತಿತ್ವ ಪ್ರದರ್ಶನ ಮಾಡಿದೆ. ಈ ಮೂಲಕ ಅಲ್ಲಿನ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್‌ಗೆ ಸ್ಪಷ್ಟ ಸಂದೇಶ ರವಾನಿಸಿದೆ.

ಹೌದು. ಸಿಂಗ್ರೌಲಿಯಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ರಾಣಿ ಅಗರವಾಲ್ 9,300 ಮತಗಳಿಂದ ಜಯಗಳಿಸುವುದರೊಂದಿಗೆ ಆಮ್ ಆದ್ಮಿ ಪಕ್ಷವು ಮಧ್ಯಪ್ರದೇಶ ರಾಜಕೀಯಕ್ಕೆ ಪ್ರವೇಶ ಮಾಡಿದೆ. ರಾಣಿ ಅಗರವಾಲ್ ಅವರು ನಿರ್ಗಮಿತ ಸಿಂಗ್ರೌಲಿ ಮುನ್ಸಿಪಲ್ ಕಾರ್ಪೊರೇಷನ್ ಅಧ್ಯಕ್ಷರಾಗಿದ್ದ ಬಿಜೆಪಿ ಅಭ್ಯರ್ಥಿ ಚಂದ್ರ ಪ್ರತಾಪ್ ವಿಶ್ವಕರ್ಮ ಅವರನ್ನು ಸೋಲಿಸಿದ್ದಾರೆ.

ಸಿಂಗ್ರೌಲಿ ಪಾಲಿಕೆಯು ಆದಾಯದ ವಿಚಾರದಲ್ಲಿ ಇಂದೋರ್ ಬಳಿಕ ಮಧ್ಯಪ್ರದೇಶದ ಎರಡನೇ ಶ್ರೀಮಂತ ಪಾಲಿಕೆಯಾಗಿದೆ. ಸಿಂಗ್ರೌಲಿ ಜಿಲ್ಲೆಯನ್ನು ರಾಜ್ಯದ ವಿದ್ಯುತ್ ಉತ್ಪಾದನೆ, ಕಲ್ಲಿದ್ದಲು ಮತ್ತು ಖನಿಜ ಗಣಿ ಲ್ಯಾಬ್ ಎಂದು ಗುರುತಿಸಲಾಗಿದೆ.

Edited By : Vijay Kumar
PublicNext

PublicNext

18/07/2022 08:10 am

Cinque Terre

26.95 K

Cinque Terre

4

ಸಂಬಂಧಿತ ಸುದ್ದಿ