ಮಂಗಳೂರು: ಮಂಗಳೂರು ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ. ಕೆಲವು ಕಡೆಗಳಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗ್ತಿದ್ದು, ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಗರದ ನೆಲ್ಲಿಕಾಯಿ ರಸ್ತೆಯಲ್ಲಿ ಏಕಮುಖ ರಸ್ತೆಯ ವಿರುದ್ಧ ಸ್ಥಳೀಯ ಕಾರ್ಪೊರೇಟರ್ ಅಬ್ದುಲ್ ಲತೀಫ್ ನೇತೃತ್ವದಲ್ಲಿ ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಅವೈಜ್ಞಾನಿಕ ಕಾಮಗಾರಿಯಿಂದಾಗಿ ದಿನನಿತ್ಯ ಈ ರಸ್ತೆಯಲ್ಲಿ ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಏಕಮುಖ ಸಂಚಾರದಿಂದಾಗಿ ಟ್ರಾಫಿಕ್ ಪೊಲೀಸರಿಂದ ಕಿರಿ ಕಿರಿ ಉಂಟಾಗ್ತಿದೆ. ಸ್ಮಾರ್ಟ್ ಸಿಟಿ ಕಾಮಗಾರಿ ಪ್ಲಾನ್ ತೋರಿಸದೆ ರಾತ್ರಿ - ಹಗಲು ಕೆಲಸ ನಡೆಯುತ್ತಿದೆ.
ಏಕಮುಖ ರಸ್ತೆಯಿಂದಾಗಿ ಇಲ್ಲಿನ ನಾಗರಿಕರು ತೊಂದರೆ ಅನುಭವಿಸುವುದನ್ನು ಇದಕ್ಕೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ.
ಶಾಲೆಗೆ ಹೋಗಿ ಬರುವವರಿಗೆ ಹೀಗೆ ಎಲ್ಲರ ಮೇಲೆ ಟ್ರಾಫಿಕ್ ಪೊಲೀಸರು ಕೇಸು ಹಾಕ್ತಿದ್ದಾರೆ.
ಈ ತರಹದ ಸ್ಮಾರ್ಟ್ ಸಿಟಿ ಅಭಿವೃದ್ಧಿ ಬೇಕಾ, ಅಗಲ ಇದ್ದ ರಸ್ತೆಯನ್ನು ಏಕಮುಖ ಮಾಡಿ ಇದೀಗ ಸಮಸ್ಯೆ ಎದುರಿಸುವಂತಾಗಿದೆ. ಜನರಿಗೆ ದಿನನಿತ್ಯ ಸಮಸ್ಯೆ ಅಗ್ತಿದೆ. ಏಕ ಮುಖ ರಸ್ತೆ ತೆರವು ಆಗುವ ತನಕ ನಾವು ಹೋರಾಟ ನಿಲ್ಲಿಸಲ್ಲ ಎಂದರು.
PublicNext
16/07/2022 09:56 pm