ಸಿದ್ದರಾಮಯ್ಯನವರ 75ನೇ ಜನ್ಮ ದಿನದ ಹಿನ್ನಲೆಯಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮ ತಯಾರಿ ಜೋರಾಗಿದೆ. ಈ ಕಾರ್ಯಕ್ರಮದ ಕುರಿತಾಗಿ ಭಾರೀ ಪ್ರಚಾರ ಕಾರ್ಯ ಕೂಡಾ ಚುರುಕಾಗಿದೆ.
ಇದೇ ಪ್ರಚಾರ ಕಾರ್ಯಕ್ಕಾಗಿ ಬಳಸುತ್ತಿರುವ ಕಾರ ಮೇಲೆ ಕರ್ನಾಟಕದ ಭೂಪಟದಲ್ಲಿ ಮೈಸೂರು ಹಾಗೂ ಕರಾವಳಿ ಭಾಗಕ್ಕೆ ಕತ್ತರಿ ಹಾಕಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಮೈಸೂರು ಜಿಲ್ಲೆಯಲ್ಲಿ ಕಂಡ ಅಪಮಾನಕರ ಸೋಲು, ಕರಾವಳಿ ಭಾಗದಲ್ಲಿ ಕಾಂಗ್ರೆಸ್ ದುರ್ಬಲವಾಗಿರುವುದು ಸಿದ್ದರಾಮಯ್ಯ ಅವರನ್ನು ನಿದ್ದೆಗೆಡಿಸಿದ್ದು, ಅದಕ್ಕೆ ಭೂಪಟಕ್ಕೆ ಕತ್ತರಿ ಹಾಕಿದ್ದಾರೆ ಎಂದು ಆರೋಪಿಸಿದೆ.
PublicNext
13/07/2022 04:13 pm