ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೂತನವಾಗಿ ತಯಾರಾಗುತ್ತಿರುವ ಸಂಸತ್ ಭವನದ ಮೇಲೆ ರಾಷ್ಟ್ರ ಲಾಂಛನ ಲೋಕಾರ್ಪನೆ ಮಾಡಿದ ಬೆನ್ನಲ್ಲೇ ಸಾಕಷ್ಟು ವಿವಾದಗಳು ಹುಟ್ಟಿಕೊಂಡಿವೆ.ಹೌದು 9,500 ಕೆಜಿ ಕಂಚಿನ ರಾಷ್ಟ್ರೀಯ ಲಾಂಛನ ಈಗ ವಿವಾದಕ್ಕೆ ಕಾರಣವಾಗಿದೆ. ಎನ್ ಡಿಎ ಸರ್ಕಾರ ರಾಷ್ಟ್ರೀಯ ಲಾಂಛನವನ್ನು ವಿರೂಪಗೊಳಿಸಿದೆ ಎಂದು ವಿರೋಧ ಪಕ್ಷಗಳು ಟೀಕೆ ವ್ಯಕ್ತಪಡಿಸಿವೆ.
ಉತ್ತರ ಪ್ರದೇಶದ ಸಾರನಾಥದ ಅಶೋಕ ಸ್ತಂಭದಲ್ಲಿರುವ ಸಿಂಹಗಳು ಶಾಂತ ಸ್ವರೂಪದಲ್ಲಿದ್ದು, ಶಾಂತಿ, ಘನತೆ ಮತ್ತು ಸುರಕ್ಷತೆ ಬಗ್ಗೆ ಗಮನ ಸೆಳೆಯುತ್ತಿದೆ.
ಆದರೆ ಹೊಸ ಪ್ರತಿಮೆಯಲ್ಲಿ ಸಿಂಹಗಳು ಉಗ್ರವಾಗಿ, ಆಕ್ರಮಣಕಾರಿ ಮಾಡುವಂತೆ ಕಂಡು ಬಂದಿದ್ದು, ಭಯ ಹುಟ್ಟಿಸುವಂತಿವೆ. ಹಾಗಾಗಿ ಈ ಸಿಂಹಗಳು ಮೂಲ ಸ್ತಂಭದಂತಿಲ್ಲ ಎಂದು ಕಿಡಿಕಾರಿವೆ.ಹೊಸ ಲಾಂಛನದಲ್ಲಿ ಸಿಂಹಗಳು ಬಾಯಿ ತೆರೆದಿದ್ದು ಎರಡು ಕೋರೆ ಹಲ್ಲುಗಳು ಕಾಣುತ್ತಿದ್ದು ಚರ್ಚೆಗೆ ಗ್ರಾಸವಾಗಿದೆ.
ಹಿರಿಯ ವಕೀಲ ಪ್ರಶಾಂತ್ ಭೂಷಣ್ ʼಗಾಂಧಿಯಿಂದ ಗೋಡ್ಸೆಯವರೆಗೆʼ ಎಂದು ಬರೆದು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. “ಗಾಂಧಿಯಿಂದ ಗೋಡ್ಸೆಯವರೆಗೆ; ನಮ್ಮ ರಾಷ್ಟ್ರೀಯ ಲಾಂಛನದಲ್ಲಿ ಸಿಂಹಗಳು ಭವ್ಯವಾಗಿ ಮತ್ತು ಶಾಂತಿಯುತವಾಗಿ ಕುಳಿತಿವೆ. ಸೆಂಟ್ರಲ್ ವಿಸ್ತಾದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸಂಸತ್ ಕಟ್ಟಡದ ಮೇಲ್ಭಾಗದಲ್ಲಿ ಅನಾವರಣಗೊಂಡ ಹೊಸ ರಾಷ್ಟ್ರೀಯ ಲಾಂಛನಗಳು ಕೋರೆಹಲ್ಲುಗಳನ್ನು ಹೊಂದಿರುವ ಕೆರಳಿರುವ ಸಿಂಹಗಳು. ಇದು ಮೋದಿಯ ನವ ಭಾರತ ಎಂದು ವ್ಯಂಗ್ಯವಾಡಿದ್ದಾರೆ.
PublicNext
12/07/2022 06:55 pm