ಚಂಡೀಗಡ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಗುರುವಾರ ಡಾಕ್ಟರ್ ಗುರುಪ್ರೀತ್ ಕೌರ್ ಅವರನ್ನು ಸರಳವಾಗಿ ವಿವಾಹವಾದರು.
ಚಂಡೀಗಡದ ಮಾನ್ ನಿವಾಸದಲ್ಲಿ ನಡೆದ, ಕೆಲವೇ ಆಪ್ತರಿಗಷ್ಟೇ ಆಹ್ವಾನವಿದ್ದ ವಿವಾಹ ಸಮಾರಂಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಎಎಪಿಯ ಕೆಲ ನಾಯಕರು ಉಪಸ್ಥಿತರಿದ್ದರು.
ಭಗವಂತ್ ಮಾನ್ ಅವರ ತಾಯಿ ಮತ್ತು ಸಹೋದರಿ, ಗುರುಪ್ರೀತ್ ಕೌರ್ ಅವರನ್ನು ವಧುವಾಗಿ ಆಯ್ಕೆ ಮಾಡಿದ್ದಾರೆ ಎಂದು ವರದಿಯಾಗಿದೆ.
PublicNext
07/07/2022 01:39 pm