ಬೆಂಗಳೂರು: ಸರಳ ವಾಸ್ತು ಶಾಸ್ತ್ರಜ್ಞ ಚಂದ್ರಶೇಖರ್ ಗುರೂಜಿ ಹತ್ಯೆ ಕಾನೂನು ಸುವ್ಯವಸ್ಥೆ ಲೋಪ ಅಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಬೆಂಗೂರುನಲ್ಲಿ ಮಾತನಾಡಿದ ಅವರು, ಗುರೂಜಿ ಹತ್ಯೆ ವೈಯುಕ್ತಿಕ ದ್ವೇಷದಿಂದಲೇ ಆಗಿದೆ. ಹೊರತು ಅಲ್ಲಿ ಕಾನೂನು ಸುವ್ಯವಸ್ಥೆ ಲೋಪ ಆಗಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ಇಂತಹ ಮನಸ್ಥಿತಿಯನ್ನ ಸರಿಮಾಡಬೇಕಿದೆ.ಕಾನೂನು ಸುವ್ಯವಸ್ಥೆ ಇನ್ನು ಗಟ್ಟಿಗೊಳಿಸುತ್ತೇವೆ.ಇಂತಹ ವಾತಾವರಣ ದಮನ ಮಾಡೋ ಕೆಲಸ ಮಾಡುತ್ತೇವೆ ಎಂದು ಕೂಡ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
PublicNext
06/07/2022 03:05 pm