ಮುಂಬೈ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿಶ್ವಾಸ ಮತ್ತೆ ಗೆದ್ದರು. ಬಳಿಕ ಭಾಷಣ ಮಾಡೋ ವೇಳೆ ಬಿಕ್ಕಿ ಬಿಕ್ಕಿ ಅಂತರು.
ಹೌದು. ವಿಧಾನಸಭೆಯಲ್ಲಿ ಶಿವಸೇನಾ ಬಂಡಾಯ ನಾಯಕ ಏಕನಾಥ್ ಶಿಂಧೆ ವಿಶ್ವಾಸ ಮತ ಸಾಬೀತು ಪಡಿಸಿದರು. ಆ ನಂತರ ಏಕನಾಥ್ ಶಿಂಧೆ ಮೊದಲ ಭಾಷಣ ಕೂಡ ಮಾಡಿದರು. ಆಗಲೇ ಶಿಂಧೆ ಭಾವುಕರಾದರು.
ಬಂಡಾಯ ಎದ್ದಾಗ ಬೆದರಿಕೆ ಕರೆಗಳು ಬಂದಿದ್ದವು ಎಂದು ಶಿಂಧೆ, ಮೃತಪಟ್ಟ ತಮ್ಮ ಇಬ್ಬರು ಮಕ್ಕಳನ್ನೂ ನೆನೆದು ದುಃಖ ತಡೆಯದೇ ಉಮ್ಮಳಿಸಿದರು.
ಅವರು ನನ್ನ ಕುಟುಂಬದ ಮೇಲೆ ದಾಳಿ ಮಾಡಿದ್ದರು. ನನ್ನ ತಂದೆ ಬದುಕಿದ್ದಾರೆ.ತಾಯಿ ಮೃತಪಟ್ಟಿದ್ದಾರೆ.ನಾನು ನನ್ನ ಹೆತ್ತವರಿಗೆ ಹೆಚ್ಚಿನ ಸಮಯ ನೀಡಲಾಗಿಲ್ಲ. ನಾನು ಮನೆಗೆ ಮರಳಿದಾಗ ಅವರು ಮಲಗಿರುತ್ತಿದ್ದರು.ನಾನು ಮಲಗಿದ್ದಾಗ ಅವರು ಕೆಲಸಕ್ಕೆ ಹೋಗ್ತಿದ್ದರು ಎಂದು ಶಿಂಧೆ.
PublicNext
04/07/2022 11:09 pm