ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೃತ್ ಪೌಲ್ ಅರೆಸ್ಟ್-ಹೊಸ ಬಾಂಬ್ ಸಿಡಿಸಿದ ಡಿಕೆಶಿ

ಬೆಂಗಳೂರು: ಪಿಎಸ್‌ಐ ಅಕ್ರಮ ಪರೀಕ್ಷಾ ಹಗರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅರೆಸ್ಟ್ ಆಗಿದ್ದಾರೆ. ಇದರ ಬೆನಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈಗ ಹೊಸ ಬಾಂಬ್ ಸಿಡಿಸಿದ್ದಾರೆ.

ಪಿಎಸ್‌ಐ ಅಕ್ರಮ ನೇಮಕಾತಿಯಲ್ಲಿ 300 ಕೋಟಿ ರೂ. ಅಕ್ರಮವಾಗಿದೆ ಅಂತಲೇ ಕುಮಾರಸ್ವಾಮಿ ಹೇಳಿದ್ದಾರೆ. ಆದರೆ, ಅದ್ಯಾವ ಲೆಕ್ಕದಲ್ಲಿ 300 ಕೋಟಿ ಹೇಳಿದ್ದಾರೋ ಏನೋ. ರಾಜ್ಯ ಆಳಿದ ಇವರಿಗೆ ಇವರದೇ ಲೆಕ್ಕ ಇರುತ್ತದೆ ಬಿಡಿ. ಆದರೆ, ಈ ವಿಚಾರದಲ್ಲಿ ನಮ್ಮ ಲೆಕ್ಕವೇ ಬೇರೆ ಇದೆ.ನಮ್ಮ ಪಟ್ಟಿನೇ ಬೇರೆ ಇದೆ ಎಂದು ಡಿಕೆಶಿ ಹೇಳಿದ್ದಾರೆ.

ನಾಳೆ ನಾವು ಎಲ್ಲವನ್ನೂ ಹೇಳುತ್ತೇವೆ. ನಮ್ಮ ಪಟ್ಟಿಯಲ್ಲಿ ಮಲ್ಲೇಶ್ವರಂನಲ್ಲಿ ಒಂದು ಪಿಎಸ್ಐ ಪೋಸ್ಟ್ ಮಾಡಿಸಿದ್ದೂ ಇದೆ ಅಂತಲೇ ಡಿಕೆಶಿ ಹೊಸ ಸಂಚಲನ ಮೂಡಿಸಿದ್ದಾರೆ.ನಾಳೆ ನಾನು ಮತ್ತು ಸಿದ್ದರಾಮಯ್ಯನವರು ಒಟ್ಟಿಗೆ ಸೇರಿದ ಪತ್ರಿಕಾಗೋಷ್ಠಿ ಮಾಡುತ್ತೇವೆ. ಪಿಎಸ್‌ಐ ಅಷ್ಟೇ ಅಲ್ಲ.BWSSB ಸೇರಿದಂತೆ ಎಲ್ಲ ನೇಮಕಾತಿಯಲ್ಲೂ ತನಿಖೆ ಆಗಬೇಕು ಎಂದು ಡಿಕೆಶಿ ತಿಳಿಸಿದ್ದಾರೆ.

Edited By :
PublicNext

PublicNext

04/07/2022 08:23 pm

Cinque Terre

43.98 K

Cinque Terre

4

ಸಂಬಂಧಿತ ಸುದ್ದಿ