ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಶಾ ಮಾತನ್ನು ಉಳಿಸಿಕೊಂಡಿದ್ದರೆ ಮಹಾರಾಷ್ಟ್ರದಲ್ಲಿ ಈಗ ಬಿಜೆಪಿಯವರೇ ಸಿಎಂ ಇರುತ್ತಿದ್ದರು'

ಮುಂಬೈ: ಬಿಜೆಪಿ ತಥಾಕಥಿತ ಶಿವಸೈನಿಕನೊಬ್ಬನನ್ನು ಮುಖ್ಯಮಂತ್ರಿ ಮಾಡಿತು. ಅಮಿತ್ ಶಾ ಅವರು ತಾನು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದರೆ ಮಹಾರಾಷ್ಟ್ರದಲ್ಲಿ ಈಗ ಬಿಜೆಪಿ ಮುಖ್ಯಮಂತ್ರಿ ಇರುತ್ತಿದ್ದರು ಎಂದು ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿದ ಬಳಿಕ ಮೊದಲ ಬಾರಿ (ಇಂದು) ಮಾತನಾಡಿರುವ ಅವರು, ಶಿವಸೇನೆ ಬಂಡಾಯಗಾರ ಏಕನಾಥ್ ಶಿಂಧೆ ಅವರೊಂದಿಗೆ ಹೊಸ ಸರಕಾರ ರಚಿಸಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಶಿವಸೇನೆಯ ಹೆಸರಿನಲ್ಲಿ ಬಿಜೆಪಿ ಸೃಷ್ಟಿಸಿರುವ ಕೆಲವರಿಂದ ನಮ್ಮ ಸರ್ಕಾರ ಬೀಳಲು ಕಾರಣವಾಯಿತು. ಏನೇ ಆಗಿದ್ದರೂ, ಈ ಹಿಂದೆ ಚುನಾವಣೆ ಸಂದರ್ಭದಲ್ಲೇ ಅಮಿತ್​ ಶಾ ಅವರ ನಮ್ಮ ಬೇಡಿಕೆಗೆ ಮಣಿದಿದ್ದರೆ ನಾವು ಬಿಜೆಪಿಯೊಂದಿಗಿನ ಸ್ನೇಹ ಬಿಡುತ್ತಿರಲಿಲ್ಲ. ಬಾಳಾಸಾಹೇಬ್​ ಠಾಕ್ರೆ ಅವರ ಕಾಲದಿಂದಲೂ ಬಿಜೆಪಿ ಜತೆಗೆ 25 ವರ್ಷಗಳ ಸ್ನೇಹವನ್ನು ಹೊಂದಿದ್ದೆವು. 2019ರ ಚುನಾವಣೆಯಲ್ಲಿ ಸಿಎಂ ಸ್ಥಾನವನ್ನು ನಮಗೆ ನೀಡಿ ಎಂದು ಕೇಳಿಕೊಂಡಿದ್ದೆವು. ಆದರೆ ಅವರು ನೀಡಲಿಲ್ಲ ಇದೇ ಕಾರಣಕ್ಕೆ ನಾವು ಎನ್​ಸಿಪಿ ಜನತೆ ಮೈತ್ರಿ ಮಾಡಿಕೊಳ್ಳುವ ಅನಿವಾರ್ಯವಿತ್ತು ಎಂದು ಹೇಳಿದರು.

2019ರ ವಿಧಾನಸಭೆ ಚುನಾವಣೆಗೆ ಮುನ್ನ ಅಮಿತ್ ಶಾ ಅವರೊಂದಿಗಿನ ಮಾತುಕತೆಯಲ್ಲಿ ಶಿವಸೇನೆ ಮತ್ತು ಬಿಜೆಪಿ, ಮುಖ್ಯಮಂತ್ರಿಯ ಹುದ್ದೆಯನ್ನು ತಲಾ ಎರಡೂವರೆ ವರ್ಷ ಹಂಚಿಕೊಳ್ಳುವ ಭರವಸೆ ನೀಡಲಾಯಿತು. ಎರಡು ಪಕ್ಷಗಳು ಐದು ವರ್ಷಗಳ ಅಧಿಕಾರದ ಅವಧಿಯನ್ನು ಹಂಚಿಕೊಳ್ಳುವ ಭರವಸೆಯನ್ನು ಬಿಜೆಪಿ ವಿಶೇಷವಾಗಿ ಅಮಿತ್ ಶಾ ಅವರು ತಿರಸ್ಕರಿಸಿದ್ದರು. ಈ ಮೂಲಕ ಶಾ ಅವರು ತನ್ನ ಮಾತಿಗೆ ತಪ್ಪಿದ್ದರು ಎಂದು ಠಾಕ್ರೆ ಆರೋಪಿಸಿದರು.

Edited By : Vijay Kumar
PublicNext

PublicNext

01/07/2022 06:29 pm

Cinque Terre

37.21 K

Cinque Terre

4

ಸಂಬಂಧಿತ ಸುದ್ದಿ