ಗದಗ: ಪ್ರತ್ಯೇಕ ಉತ್ತರ ಕರ್ನಾಟಕದ ಕುರಿತು ಸಚಿವ ಉಮೇಶ್ ಕತ್ತಿ ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಕರ್ನಾಟಕವನ್ನು ಇಬ್ಭಾಗ ಮಾಡಲು ಯಾರೂ ಒಪ್ಪೋದಿಲ್ಲ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು.
ಗದಗ ಜಿಲ್ಲೆಯ ನರಗುಂದದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಕುರಿತು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ರು. ಇಂತಹ ಹೇಳಿಕೆ ಕೊಡುವ ಮುನ್ನ ಅವರ ಸ್ಥಾನಮಾನದ ಬಗ್ಗೆ ಯೋಚಿಸಬೇಕು. ನೀವು ದ್ರೌಪದಿಗೆ ಅವಮಾನ ಮಾಡಿದ್ರೆ, ಸ್ತ್ರೀ ಕುಲಕ್ಕೆ ಅವಮಾನ ಮಾಡಿದಂತೆ. ಪಂಚ ಪತೀವ್ರತೆಯರಲ್ಲಿ ದ್ರೌಪದಿಯೂ ಒಬ್ಬಳು. ದ್ರೌಪದಿ ಹೆಸರಿಟ್ಟುಕೊಳ್ಳೋದು ತಪ್ಪಾ ಎಂದು ಪ್ರಶ್ನೆ ಮಾಡಿದರು.
ಹಾಗೇ ರಾಮ್ ಗೋಪಾಲ್ ವರ್ಮಾ ಕೌರವರ ಕಡೇನಾ, ಮಾತಾಡೋಕು ಒಂದು ಇತಿ ಮಿತಿ ಇರಲಿ. ಅವನು ಬಹುತೇಕ ಕೌರವರ ಕಡೆ ಇರಬೇಕು ಎಂದು ಏಕವಚನದಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಹರಿಹಾಯ್ದರು.
PublicNext
25/06/2022 10:14 pm