ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಬಲ್ ಇಂಜಿನ್ ಸರ್ಕಾರದ ವಿಕಾಸ 40% ಕಮಿಷನ್‌ನಲ್ಲಿದೆ!: ಕಾಂಗ್ರೆಸ್ ವ್ಯಂಗ್ಯ

ಬೆಂಗಳೂರು: ಡಬಲ್ ಇಂಜಿನ್ ಸರ್ಕಾರಗಳಿಂದ ವಿಕಾಸ್ ಪರ್ವ – ಪ್ರಧಾನಿ ಮೋದಿ. ನೆರೆ ಪರಿಹಾರವಿಲ್ಲ, ಕೋವಿಡ್ ಪರಿಹಾರ ಇನ್ನೂ ನೀಡಿಲ್ಲ, ವಸತಿ ಯೋಜನೆಗಳು ಹಳ್ಳ ಹಿಡಿದಿವೆ, ಜಿಎಸ್‌ಟಿ ಬಾಕಿ ಇನ್ನೂ ಕೊಟ್ಟಿಲ್ಲ, ರಸ್ತೆ ಗುಂಡಿಗಳನ್ನು ಮುಚ್ಚುವವರಿಲ್ಲ, ವಿಕಾಸವಿರುವುದು 40% ಕಮಿಷನ್‌ನಲ್ಲಿ ಮಾತ್ರ! ಲಜ್ಜೆ ಬಿಟ್ಟವರು ಮಾತ್ರ ಸುಳ್ಳನ್ನು ಸುಲಲಿತವಾಗಿ ಹೇಳಬಲ್ಲರು ಎಂಬುದಾಗಿ ಕಾಂಗ್ರೆಸ್, ಮೋದಿ ವಿರುದ್ಧ ಕಿಡಿಕಾರಿದೆ.

ಈ ಬಗ್ಗೆ ಟ್ವಿಟರ್ ಮಾಡಿದ್ದು, ದರ ಏರಿಕೆ ಮಾತ್ರವಲ್ಲ ಇಂಧನ-ತೈಲಗಳ ಅಭಾವದ ಸೃಷ್ಟಿಯೂ ಅಚ್ಛೆ ದಿನಗಳ ಸಾಧನೆಗಳಲ್ಲೊಂದು! ಮೋದಿ ಸ್ನೇಹಿತರ ಖಾಸಗಿ ಕಂಪೆನಿಗಳಿಗೆ ಅನುಕೂಲ ಮಾಡಿಕೊಡುವ ಎಲ್ಲಾ ಕೆಲಸಗಳನ್ನೂ ಸರ್ಕಾರ ಮಾಡುತ್ತಿದೆ, ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳಲ್ಲಿ ಅಭಾವ ಸೃಷ್ಟಿಸಿ ಮುಳುಗಿಸುವ ಹುನ್ನಾರ ಇರುವಂತಿದೆ. ಮುಂದಿನ ದಿನಗಳು ಜನತೆಗೆ ಇನ್ನಷ್ಟು ಭೀಕರವಾಗಿರಲಿವೆ ಎಂದು ಹೇಳಿದೆ.

Edited By : Nagaraj Tulugeri
PublicNext

PublicNext

21/06/2022 04:24 pm

Cinque Terre

24.61 K

Cinque Terre

0

ಸಂಬಂಧಿತ ಸುದ್ದಿ