ಶಿವಮೊಗ್ಗ: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಎಷ್ಟು ವರ್ಷಕ್ಕೆ ಮದುವೆ ಆದ್ರು? ಎಷ್ಟು ವರ್ಷಕ್ಕೆ ಮಕ್ಕಳನ್ನು ಮಾಡಿದ್ರು? ಅವರಿಗೇನು ಗೊತ್ತಾಗಲ್ವಾ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
'ಅಗ್ನಿಪಥ್ ಯೋಜನೆಗೆ ಒಳಪಟ್ಟ ಯುವಕ 21 ವರ್ಷಕ್ಕೆ ನಿರುದ್ಯೋಗಿ ಆಗ್ತಾನೆ' ಎಂಬ ಸಿದ್ದರಾಮಯ್ಯ ಅವರು ಹೇಳಿಕೆಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ ಕೆ.ಎಸ್.ಈಶ್ವರಪ್ಪ ಅವರು, 21 ವರ್ಷಕ್ಕೆ ಯುವಕ ಮದುವೆಯಾಗಿ ಮಕ್ಕಳು ಮಾಡ್ತಾನೆ. ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲ, ಇದು ಸಿದ್ದರಾಮಯ್ಯ ಎಷ್ಟು ವರ್ಷಕ್ಕೆ ಮದುವೆ ಆಗಿದ್ದರು? 18 ವರ್ಷವಾದ ಯುವಕರು ಮತ ಚಲಾಯಿಸಿ, ನಿರ್ಧಾರ ಮಾಡುತ್ತಾರೆ. ಸಿದ್ದರಾಮಯ್ಯ ಸಂವಿಧಾನಕ್ಕೆ ದ್ರೋಹ ಮಾಡ್ತಿದ್ದಾರೆ. ಅಂಬೇಡ್ಕರ್ ಗೆ ಅವಮಾನ ಮಾಡ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಯುವಕರು ಭಯೋತ್ಪಾದಕರ ರೀತಿ ಆಗುತ್ತಾರೆಂದು ಕಾಂಗ್ರೆಸ್ ನವರು ಹೇಳುತ್ತಾರೆ. ನಮ್ಮ ದೇಶದ ಯುವಕರು ಭಯೋತ್ಪಾದಕರಾಗಲ್ಲ. ಕಾಂಗ್ರೆಸ್ ನವರು ಭಯೋತ್ಪಾದಕರಾಗಿ ಮಾಡುತ್ತಿದ್ದಾರೆ ಎಂದರು.
ರಾಹುಲ್ ಗಾಂಧಿ ಇಡಿ ವಿಚಾರಣೆ ವಿಚಾರವಾಗಿ ಮಾತನಾಡಿದ ಅವರು, ಪ್ರತಿಭಟನೆಗೆ ಅವಕಾಶವಿದೆ. ಆದರೆ ರಾಹುಲ್ ಗಾಂಧಿ ವಿಚಾರಣೆಗೆ ಕರೆದರೆ ತಪ್ಪಾ? ರಾಹುಲ್ ಗಾಂಧಿ ಈ ದೇಶದ ಒಬ್ಬ ಪ್ರಜೆ. ಅವರನ್ನು ಇನ್ನು ಬಂಧಿಸಿಲ್ಲ, ಜೈಲಿಗೆ ಕಳುಹಿಸಿಲ್ಲ. ವಿಚಾರಣೆಗೆ ಕರೆಯಲೇ ಬೇಡಿ ಎಂದು ನಿಮ್ಮ ಎಐಸಿಸಿ ಯಲ್ಲಿ ಒಂದು ರೆಸ್ಯೂಲುಷನ್ ಮಾಡಿಬಿಡಿ. ಅದರಲ್ಲೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆ ಕರೆಯಲೇಬೇಡಿ ಅಂತಾ ರೆಸ್ಯೂಲುಷನ್ ಮಾಡಿ ಎಂದು ಟೀಕಿಸಿದರು.
PublicNext
19/06/2022 05:29 pm