ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಈಗಲೇ ತಯಾರಿ ನಡೆಸಿದೆ. ಈ ಕಾರಣಕ್ಕೇನೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ಇಂದು ಎರಡು ಸಭೆ ನಡೆಯಲಿವೆ. ಈ ಸಭೆಯಲ್ಲಿ ಜೆಪಿ ನಡ್ಡಾ ಭಾಗಿ ಆಗುತ್ತಾರೆ. ಬಳಿಕ ವಾಪಸ್ ದೆಹಲಿಗೆ ಮರಳುತ್ತಾರೆ.
ದೆಹಲಿಯಿಂದ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿಗೆ ಬರೋ ನಡ್ಡಾ, ಯಲಹಂಕದ ರಮಡಾ ಹೋಟೆಲ್ ನಲ್ಲಿ ಒಬಿಸಿ ಮೋರ್ಚಾದ ಮೂರು ದಿನಗಳ ರಾಷ್ಟ್ರೀಯ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭದಲ್ಲಿ ಮುಖಂಡರು ಮತ್ತು ಕಾರ್ಯಕರ್ತರನ್ನ ಉದ್ದೇಶಿಸಿ ಜೆಪಿ ನಡ್ಡಾ ಮಾತನಾಡಲಿದ್ದಾರೆ.
PublicNext
18/06/2022 07:28 am