ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಅಗ್ನಿಪಥ್ ಹೆಸರಲ್ಲಿ ಯುವಕರ ಅಗ್ನಿಪರೀಕ್ಷೆ ಮಾಡಬೇಡಿ ಪ್ರಧಾನಿಗಳೇ..': ರಾಹುಲ್ ಕಿಡಿ

ನವದೆಹಲಿ: ಕೇಂದ್ರದ ಅಗ್ನಿಪಥ್ ಯೋಜನೆ ವಿರುದ್ಧ ಸೇನಾ ಆಕಾಂಕ್ಷಿಗಳು ಸಿಡಿದೆದ್ದಿದ್ದಾರೆ. ಕೆಲವೆಡೆ ಈ ಪ್ರತಿಭಟನೆಗಳು ಹಿಂಸಾ ಸ್ವರೂಪಕ್ಕೆ ತಿರುಗಿವೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ನಿರುದ್ಯೋಗಿ ಯುವಜನತೆಯ ಧ್ವನಿ ಕೇಳಿ, ಅವರನ್ನು ಅಗ್ನಿಪಥದಲ್ಲಿ ನಡೆಯುವಂತೆ ಮಾಡುವುದರೊಂದಿಗೆ ಅವರ ತಾಳ್ಮೆಯ ಅಗ್ನಿಪರೀಕ್ಷೆ ಮಾಡಬೇಡಿ' ಎಂದು ಒತ್ತಾಯಿಸಿದ್ದಾರೆ.

ಗುತ್ತಿಗೆ ಆಧಾರದ ಮೇಲೆ ಅಲ್ಪಾವಧಿಯ ಸೇನಾ ನೇಮಕಾತಿಯ ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ವಿರುದ್ಧ ದೇಶದ ವಿವಿಧೆಡೆ ಗುರುವಾರ ಭಾರೀ ಪ್ರತಿಭಟನೆ ನಡೆದಿದೆ. ಏಕ ರೂಪ ಪಿಂಚಣಿ ಯೋಜನೆ ಇಲ್ಲ, ಎರಡು ವರ್ಷಗಳಿಗೆ ನೇರ ನೇಮಕಾತಿ ಇಲ್ಲ, ನಾಲ್ಕು ವರ್ಷಗಳ ನಂತರ ಭವಿಷ್ಯದಲ್ಲಿ ಭದ್ರತೆ ಇಲ್ಲ, ಸೇನೆಗಾಗಿ ಸರ್ಕಾರ ಗೌರವ ತೋರಿಸುತ್ತಿಲ್ಲ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

Edited By : Nagaraj Tulugeri
PublicNext

PublicNext

16/06/2022 06:44 pm

Cinque Terre

32.1 K

Cinque Terre

9

ಸಂಬಂಧಿತ ಸುದ್ದಿ