ತುಮಕೂರು: ಗುಬ್ಬಿ ಶಾಸಕ ಶ್ರೀನಿವಾಸ್ ಬದುಕಿರೋವಾಗ್ಲೇ ತಿಥಿ ಕಾರ್ಡ್ ಅನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿ ವಿಕೃತಿ ಮೆರೆದ ಘಟನೆ ಈಗ ನಡೆದಿದೆ.
ಪ್ರಚಂಡ ಭೈರವ ಹೆಸರಿನ ಫೇಸ್ ಬುಕ್ ಖಾತೆಯಲ್ಲಿಯೇ ಈ ಒಂದು ತಿಥಿ ಕಾರ್ಡ್ ಪೋಸ್ಟ್ ಆಗಿದೆ.ಜೂನ್-10 ರಂದು ನಿಧನರಾಗಿದ್ದಾರೆ. ಜೂನ್-21 ರಂದು ಸ್ವಕ್ಷೇತ್ರ ಗುಬ್ಬಿಯಲ್ಲಿ ಕೈಲಾಸ ಸಮಾರಾಧನೆ ನಡೆಯಲಿದೆ ಅಂತಲೇ ತಿಥಿ ಕಾರ್ಡ್ ನಲ್ಲಿ ಬರೆಯಲಾಗಿದೆ.
ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿಯೇ ಎಚ್ಡಿಕೆ ವಿರುದ್ಧ ಶ್ರೀನಿವಾಸ್ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಕೆಂಡಾಮಂಡಲವಾದ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಶ್ರೀನಿವಾಸ ಬೆಂಬಲಿಗರೂ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು.ಗುಬ್ಬಿ ಶಾಸಕ ಶ್ರೀನಿವಾಸ್ ತಿಥಿ ಕಾರ್ಡ್ ಸೋಷಿಯಲ್ ಮೀಡಿಯಾದಲ್ಲಿ ಕಂಡು ಇದು ವಿಕೃತಿಯ ಪರಮಾವಧಿ ಅಂತಲೇ ಸಿಟ್ಟುಹೊರ ಹಾಕಿದ್ದಾರೆ.
PublicNext
11/06/2022 10:15 pm