ತುಮಕೂರು: ಮಾಜಿ ಮುಖ್ಯಮಂತ್ರಿ ಎಚ್‌ಡಿ.ಕುಮಾರ್ ಸ್ವಾಮಿ ಹಾಗೂ ರೇವಣ್ಣ ನನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಆದರೆ, ನಾನು ರಾಜ್ಯ ಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೇನೆ ಮತಹಾಕಿದ್ದೇನೆ ಎಂದು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಬೇಸರದಿಂದಲೇ ಸಿಟ್ಟು ಹೊರಹಾಕಿದ್ದಾರೆ.
ನಾನು ಮೊದಲಿನಿಂದಲೂ ಬಿಜೆಪಿ ವಿರೋಧಿನೇ. ಇದನ್ನ ವಿರೋಧಿಸುತ್ತಲೇ ಬಂದಿದ್ದೇನೆ.ಇಂತಹ ಮನಸ್ಥಿತಿಯ ನಾನು ಬಿಜೆಪಿಗೆ ಮನ ಹಾಕಲು ಸಾಧ್ಯವೇ. ನಾನು ಹಾಕುತ್ತೇನೆ ಎಂದು ಮಾಧ್ಯಮದ ಮುಂದೇನೆ ಶ್ರೀನಿವಾಸ ಪ್ರಶ್ನೆ ಮಾಡಿದ್ದಾರೆ.
ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ ಶಾಸಕ ಶ್ರೀನಿವಾಸ್, ಇವನೇನು ಉತ್ತಮನಾ ? ಇವನು ಯಾವುದರಲ್ಲಿ ಉತ್ತಮ ಹೇಳಿ ? ಬೆಳಗ್ಗೆ ಒಂದು ಹೇಳ್ತಾನೆ. ಸಂಜೆ ಒಂದು ಹೇಳ್ತಾನೆ. ಚುನಾವಣೆ ಟೈಮ್ ನಲ್ಲಿ ನಾನು ಸರಿಯಾಗಿಯೇ ಬ್ಯಾಲೆಟ್ ಪೇಪರ್ ತೋರಿಸಿದ್ದೇನೆ.
ಅಷ್ಟೇ ಅಲ್ಲ, ಮೂರು ನಾಲ್ಕು ನಿಮಿಷ ಪೇಪರ್ ಹಿಡಿದುಕೊಂಡೇ ಇದ್ದೇ. ಇಷ್ಟೆಲ್ಲ ಆದ್ಮೇಲೆನೆ ನಾನು ವೋಟ್ ಹಾಕಿದ್ದೇನೆ. ಈ ವೇಳೆ ಕುಮಾರ್ ಸ್ವಾಮಿ ಕತ್ತೆ ಕಾಯುತಿದ್ನಾ ? ಹೆಬ್ಬೆಟ್ಟು ತೆಗಿ ಎಂದು ಹೇಳಬೇಕಿತ್ತು ಅಂತಲೇ ಗುಬ್ಬಿ ಶಾಸಕ ಶ್ರೀನಿವಾಸ,ಎಚ್ಡಿಕೆಗೆ ಏಕವಚನದಲ್ಲಿಯೇ ವಾಗ್ದಾಳಿ ಮಾಡಿದ್ದಾರೆ.
PublicNext
11/06/2022 04:44 pm