ಮೈಸೂರು: ರಾಜ್ಯ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಗೆಲುವು ಖಚಿತ. ಹೀಗಂತ ಮಾಜಿ ಸಿಎಂ ಸಿದ್ದರಾಮಯ್ಯ ಈಗಲೇ ಭವಿಷ್ಯ ನುಡಿದ್ದಾರೆ.
ದೇವೇಗೌಡರು ಪ್ರಧಾನಿ ಅಗಲು ನಾವು ಬೆಂಬಲಿಸಿದ್ದೇವೆ. ರಾಜ್ಯದಲ್ಲಿ ಕುಮಾರ್ ಸ್ವಾಮಿ ಮುಖ್ಯಮಂತ್ರಿ ಆಗಲೂ ಕೂಡ ಸಪೋರ್ಟ್ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸಭಾ ಚುನಾವಣೆಯಲ್ಲಿ ಮನ್ಸೂರ್ ಅಲಿ ಖಾನ್ ಗೆಲ್ಲೋದಕ್ಕೆ ಜೆಡಿಎಸ್ ಬೆಂಬಲಿಸುತ್ತದೆ ಎಂದು ವಿಶ್ವಾಸ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಸಿದ್ದರಾಮಯ್ಯನವ್ರು,ನಮ್ಮ ಬಳಿ 25 ಮತಗಳು ಇವೆ. ನಮ್ಮ ಪಕ್ಷದ ಎರಡನೇ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಗೆಲ್ಲೋದಕ್ಕೆ ಎಷ್ಟು ಮತಗಳು ಬೇಕೋ ಅಷ್ಟು ಮತಗಳು ಬರುತ್ತವೆ.ಆತ್ಮಸಾಕ್ಷಿಯಾಗಿಯೇ ಬಿಜೆಪಿ ಮತ್ತು ಜೆಡಿಎಸ್ ಮತ ಹಾಕುತ್ತಿದ ಎಂದು ಸಿದ್ದು ತಿಳಿಸಿದ್ದಾರೆ.
PublicNext
06/06/2022 12:02 pm