ಗದಗ: RSS ಅನ್ನ ಬುಡಸಮೇತ ಕಿತ್ತೆಸೆಯುತ್ತೇವೆ ಎಂದು ನೆಹರು ಅಂತು ಪಾರ್ಲಿಮೆಂಟ್ ನಲ್ಲಿಯೇ ಹೇಳಿದ್ದರು.ಆದರೆ, ಏನೂ ಮಾಡಲಿಕ್ಕೆ ಆಗಲೇ ಇಲ್ಲ ಎಂದು ರೋಣ ಶಾಸಕ ಕಳಕಪ್ಪ ಬಂಡಿ ನಿನ್ನೆ ಗದಗನಲ್ಲಿ ಹೇಳಿದ್ದಾರೆ.
ನೆಹರು ಮೊದಲು RSS ಸ್ವಯಂ ಸೇವಕರೇ ಆಗಿದ್ದರು. ನೆಹರು ಚಡ್ಡಿ ಹಾಕಿರೋ ಪೋಟೋ ಕೂಡ ಇದೆ ನೋಡಿ. ಆದರೆ, ಇವರು ಈಗ ಕಾಂಗ್ರೆಸ್ ನ ಸಿದ್ದರಾಮಯ್ಯ ಚಡ್ಡಿ ಸುಡೊಕೆ ಹೊರಟ್ಟಿದ್ದಾರೆ. ಇವರು ಯಾರ್ ಚಡ್ಡಿ ಸುತ್ತಾರಂತೆ ಎಂದು ಕಳಕಪ್ಪ ಬಂಡಿ ಪ್ರಶ್ನೆ ಮಾಡಿದ್ದಾರೆ.
ನಾವು RSS ನವರು ಈಗಾಗಲೇ ಚಡ್ಡಿ ಬಿಟ್ಟಿದ್ದೇವೆ. ಪ್ಯಾಂಟ್ ಧರಿಸುತ್ತಿದ್ದೇವೆ. ಹೀಗಿರೊವಾಗ ಸಿದ್ದರಾಮಯ್ಯನವರು ಅದ್ಯಾರ್ ಚಡ್ಡಿ ಸುಡತಾರೋ ಏನೋ. ಕಾಂಗ್ರೆಸ್ ನವರಿಗೆ ಚೆಡ್ಡಿ ಹೆಚ್ಚಾಗಿರಬೇಕು. ಅದಕ್ಕೇನೆ ಸುಡೋಕೆ ಹೊರಟ್ಟಿದ್ದಾರೆ ಎಂದು ಸಣ್ಣ ಕೈಗಾರಿಕಾ ನಿಗಮ ಅಧ್ಯಕ್ಷ ಶಾಸಕ ಕೆ.ಜಿ ಬಂಡಿ ವ್ಯಂಗ್ಯವಾಡಿದ್ದಾರೆ.
PublicNext
05/06/2022 10:46 am