ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಧಾನಿ ಮೋದಿ ಮಕ್ಕಳು ಮಾಡದಿದ್ರೆ ಅದು ನನ್ನ ತಪ್ಪಾ?: ಇಬ್ರಾಹಿಂ ವ್ಯಂಗ್ಯ

ಕಲಬುರಗಿ: ಬಿಜೆಪಿ ಅವರಿಗೆ ಪ್ರಧಾನಿ ಮೋದಿ ಅಭಿಮಾನವಿದ್ದರೆ ನಮಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ಅಭಿಮಾನವಿದೆ. ಕುಟುಂಬ ರಾಜಕಾರಣದಿಂದ ಗೌರವ ಬೆಳೆಯುತ್ತದೆ. ಕಾಂಗ್ರೆಸ್‌ನಲ್ಲೂ ಕುಟುಂಬ ರಾಜಕಾರಣ ಇತ್ತು. ಇಂದಿರಾ ಗಾಂಧಿ ನಂತರ ರಾಜೀವ್‌ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಧಿಕಾರಕ್ಕೆ ಬರಲಿಲ್ಲವೇ? ಈಗ ಪ್ರಧಾನಿ ಮೋದಿ ಅವರು ಮಕ್ಕಳು ಮಾಡದೇ ಇದ್ರೆ ಅದು ನನ್ನ ತಪ್ಪಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಪ್ರಶ್ನಿಸಿ ವ್ಯಂಗ್ಯವಾಡಿದ್ದಾರೆ.

ಕಲಬುರಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರಿಗೆ ಕೈಮುಗಿದು ಕೇಳಿದ್ದೇವೆ ರಾಜ್ಯಸಭೆ ಚುನಾವಣೆಯಲ್ಲಿ ನಮಗೆ ಬೆಂಬಲಿಸಿ ಅಂತ. ಅಭ್ಯರ್ಥಿ ನಿಲ್ಲಿಸುವ ಮೊದಲೇ ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡಿದ್ದೇವೆ. ಕೋಮವಾದಿ ಶಕ್ತಿ ಮಟ್ಟಹಾಕುವ ಇಚ್ಛೆ ಇದ್ದರೆ ನಮಗೆ ಸಹಾಯ ಮಾಡಲಿ ಎಂದರು.

Edited By : Vijay Kumar
PublicNext

PublicNext

05/06/2022 07:32 am

Cinque Terre

60.06 K

Cinque Terre

83

ಸಂಬಂಧಿತ ಸುದ್ದಿ