ಶಿವಮೊಗ್ಗ: ನಪುಂಸಕ ಎಂಬ ಪದ ನಪುಂಸಕರಿಗೆ ಮಾತ್ರ ಗೊತ್ತಿರುತ್ತೆ. ಸಿದ್ದರಾಮಯ್ಯ ತಲೆಯಲ್ಲಿ ಸಗಣಿ ಬಿಟ್ಟರೆ ಬೇರೇನೂ ಇಲ್ಲ. ಓವೈಸಿಗೂ ಸಿದ್ದರಾಮಯ್ಯಗೂ ವ್ಯತ್ಯಾಸ ಇಲ್ಲ. ಇಬ್ಬರೂ ದೇಶ ವಿರೋಧಿಗಳು ಎಂದು ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ಹೇಳಿದ್ದಾರೆ.
ಆರ್‌ಎಸ್‌ಎಸ್ ಎಂಬುದು ನಪುಂಸಕ ಸಂಘಟನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡುರುವ ಅವರು, ಆರ್‌ಎಸ್‌ಎಸ್ ನಮ್ಮ ತಾಯಿ ಇದ್ದಂತೆ. ತಾಯಿಗೆ ಅವಮಾನ ಮಾಡಿದ್ರೆ ಸುಮ್ಮನಿರಬೇಕಾ? ಎಂದು ಪ್ರಶ್ನಿಸಿದ್ದಾರೆ. ಹುಲಿಗೆ ಹುಲಿ ಮರಿ ಬಗ್ಗೆ ಗೊತ್ತು. ಸಿಂಹಕ್ಕೆ ಸಿಂಹದ ಮರಿ ಬಗ್ಗೆ ಗೊತ್ತು. ಆರ್‌ಎಸ್‌ಎಸ್ ಹುಲಿ ಸಿಂಹಗಳನ್ನು ಸೃಷ್ಟಿಸುವ ರಾಷ್ಟ್ರಭಕ್ತ ಸಂಘಟನೆ. ಈ ರೀತಿಯ ಹೇಳಿಕೆ ಕೊಟ್ಟು ಕಾಂಗ್ರೆಸ್ ನಪುಂಸಕವಾಗಿದೆ. ಇಂದಿರಾ ಗಾಂಧಿ ಮತ್ತು ಇತರ ನಾಯಕರು ಆರ್‌ಎಸ್‌ಎಸ್‌ಗೆ ಏನೂ ಮಾಡಲು ಆಗಲಿಲ್ಲ. ಇನ್ನು ಜುಜುಬಿ ಸಿದ್ದರಾಮಯ್ಯರಿಂದ ಆರ್‌ಎಸ್‌ಎಸ್‌ಗೆ ಏನು ಮಾಡಲು ಸಾಧ್ಯ? ನೀವು ಆರ್‌ಎಸ್‌ಎಸ್ ಬಗ್ಗೆ ಟೀಕೆ ಮಾಡಿದಷ್ಟು ಅವನತಿ ಆಗುತ್ತ ಇರುತ್ತೀರಿ. ನಿಮ್ಮ ನಾಯಕಿ ಸೋನಿಯಾ ಗಾಂಧಿ ಅವರು ನಮ್ಮ ದೇಶದವರಾ? ಇಂದಿರಾ ಗಾಂಧಿ ಪತಿ ಫಿರೋಜ್ ಗಾಂಧಿ ನಮ್ಮ ಕಾಂಗ್ರೆಸ್‌ನವರಾ? ಎಂದು ಪ್ರಶ್ನಿಸಿದ್ದಾರೆ.
ಅನೇಕ ತ್ಯಾಗಿಗಳ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಇದರ ದುರುಪಯೋಗವನ್ನು ಕಾಂಗ್ರೆಸ್ ಪಕ್ಷ ಪಡೆದುಕೊಳ್ಳುತ್ತಿದೆ. ಹೆಗಡೆವಾರ್, ಮೋದಿ ಅವರನ್ನು ತೆಗಳಿ ಆ ಮೂಲಕ ದೊಡ್ಡವರಾಗಬೇಕೆಂಬ ಭ್ರಮೆಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಇದು ಯಾವ ಕಾರಣಕ್ಕೂ ಸಾಧ್ಯ ಇಲ್ಲ. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಧ್ವಂಸ ಮಾಡಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಹೆಡಗೆವಾರ್ ಬಗ್ಗೆ ಖರ್ಗೆ ಅವರು ಮಾತನಾಡಿದ್ದು ಕೇಳಿ ರಕ್ತ ಕುದಿಯುತ್ತಿದೆ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
PublicNext
30/05/2022 10:38 am