ಬೆಂಗಳೂರು: 2021ರ ಕೆಎಎಸ್ ಮುಖ್ಯ ಪರೀಕ್ಷೆ ಮೌಲ್ಯಮಾಪನ ಕುರಿತಂತೆ ಮಾಜಿ ಸಚಿವ ಎಸ್ ಸುರೇಶ್ ಕುಮಾರ್, ಪತ್ರ ಬರೆದು ಮೌಲ್ಯ ಮಾಪನ ಆರಂಭಗೊಂಡಿದೆಯಾ? ಅಥವಾ ಇಲ್ಲವಾ ಎಂಬುದಾಗಿ ಕೋರಿದ್ದರು. ಆದರೆ ಈವರೆಗೆ ಯಾವುದೇ ಉತ್ತರ ಕರ್ನಾಟಕ ಲೋಕಸೇವಾ ಆಯೋಗದಿಂದ ಬಾರದ ಕಾರಣ, ಕೆಪಿಎಸ್ಸಿ ವಿರುದ್ಧ ಸಿಡಿದೆದ್ದಿದ್ದಾರೆ. ಮೇ.31ರಂದು ಆಯೋಗದ ಮುಂದೆ ಪ್ರತಿಭಟನೆಗೆ ನಿರ್ಧರಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಅವರು, 2021ರ ಫೆಬ್ರವರಿಯಲ್ಲಿ ನಡೆದಿದ್ದಂತ ಕೆಎಎಸ್ ಮುಖ್ಯ ಪರೀಕ್ಷೆಗಳ ಮೌಲ್ಯಮಾಪನ ಕುರಿತಂತೆ ಕೆಪಿಎಸ್ಸಿ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಕೋರಲಾಗಿತ್ತು. ಮೌಲ್ಯಮಾಪನ ಪ್ರಕ್ರಿಯೆ ಈವರೆಗೆ ಪ್ರಾರಂಭವಾಗಿದ್ಯೋ, ಇಲ್ಲವೋ ಎಂದು ಕೇಳಲಾಗಿತ್ತ. ಆದರೆ ಈವರೆಗೆ ನನಗಾಗಲಿ, ಅಭ್ಯರ್ಥಿಗಳಿಗಾಗಲಿ ಯಾವುದೇ ಮಾಹಿತಿ, ಉತ್ತರ ಬಂದಿಲ್ಲ.
ಈ ಹಿನ್ನೆಲೆಯಲ್ಲಿ ಯುವಕರು ಭರವಸೆ ಕೆಳೆದುಕೊಳ್ಳುವ ಮುನ್ನ, ಎಚ್ಚೆತ್ತುಕೊಳ್ಳದ ಕರ್ನಾಟಕ ಲೋಕಸೇವಾ ಆಯೋಗದ ನಡೆಯ ವಿರುದ್ಧ, ಅಭ್ಯರ್ಥಿಗಳ ಪರವಾಗಿ ದಿನಾಂಕ 31-05-2022ರಂದು ಬೆಳಿಗ್ಗೆ 10 ಗಂಟೆಗೆ ಉದ್ಯೋಗಸೌಧದ ಮುಖ್ಯದ್ವಾರದ ಬಳಿ ನಿಲ್ಲುತ್ತೇನೆ. ಆಗಲಾದ್ರೂ ಮಾಹಿತಿ ನೀಡುತ್ತಾರೆ ಎಂದು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.
PublicNext
28/05/2022 11:06 pm