ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಶ್ನೆಗೆ ಉತ್ತರಿಸಲಾಗದೇ ಸೈಲೆಂಟ್ ಆದ ರಾಹುಲ್ ಗಾಂಧಿ: ಕಾಲೆಳೆದ ಬಿಜೆಪಿ

ನವದೆಹಲಿ: ಸಂದರ್ಶನವೊಂದರಲ್ಲಿ ನಿರೂಪಕಿ ಕೇಳಿದ ಪ್ರಶ್ನೆಗೆ ನಿರುತ್ತರರಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೆಲ‌ ಕ್ಷಣಗಳ ಕಾಲ ತಬ್ಬಿಬ್ಬಾಗಿದ್ದಾರೆ. ನಂತರ ಏನನ್ನೋ ಹೇಳಲು ಪ್ರಯತ್ನಿಸಿ ಉತ್ತರ ಕೊಡಲು ತಡವರಿಸಿದ್ದಾರೆ. ಇದರ ವಿಡಿಯೋ ಈಗ ವೈರಲ್ ಆಗುತ್ತಿದೆ.

ಹೌದು. ಸಂದರ್ಶನದಲ್ಲಿ ನಿರೂಪಕಿಯೊಬ್ಬರು ಭಾರತದಲ್ಲಿ ನಡೆಯುತ್ತಿರುವ ಹಿಂಸಾಚಾರಗಳ ಬಗ್ಗೆ ಏನು ಹೇಳ್ತೀರಿ ಎಂದಿದ್ದಾರೆ. ಈ ಪ್ರಶ್ನೆಗೆ ನಿರುತ್ತರರಾದ ರಾಹುಲ್ ಗಾಂಧಿ ಕೆಲಕ್ಷಣಗಳ ಕಾಲ ಸೈಲೆಂಟ್ ಆಗಿದ್ದಾರೆ. ನಂತರ ಸಾವರಿಸಿಕೊಂಡು ಉತ್ತರ ಕೊಡಲು ತಡವರಿಸಿದ್ದಾರೆ. ಈ ವೇಳೆ ಕೆಲ ಪ್ರೇಕ್ಷಕರು ಚಪ್ಪಾಳೆ ಬಾರಿಸಿದ್ದಾರೆ. ಈ ಗೊಂದಲದಲ್ಲಿ ಸಂದರ್ಭ ಮರೆಯಾಗಿದೆ.

ಇದರ ವಿಡಿಯೋ ಟ್ವೀಟ್ ಮಾಡಿರುವ ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ, ನೀವು ಪತ್ರಕರ್ತರೊಂದಿಗೆ ಪೂರ್ವನಿರ್ಧರಿತ ಹಾಗೂ ಮೊದಲೇ ಸ್ಕ್ರಿಪ್ಟ್ ಮಾಡಿಕೊಂಡ ಪ್ರಕಾರ ಸಂದರ್ಶನ ನಡೆಸುವುದು ಉತ್ತಮ ಎಂದಿದ್ದಾರೆ.

ಈ ಟ್ವೀಟ್‌ಅನ್ನು ಶೇರ್ ಮಾಡಿರುವ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯೆ ಲಾವಣ್ಯಾ ಬಲ್ಲಾಳ್, ನಿಮ್ಮ ಬಾಸ್ (ಪ್ರಧಾನಿ ಮೋದಿ) ಇದುವರೆಗೆ ಮಾಧ್ಯಮದ ಮುಂದೆ ಬಂದಿಲ್ಲ. ಇದು ದುರದೃಷ್ಟಕರ ಎಂದಿದ್ದಾರೆ.

Edited By : Nagaraj Tulugeri
PublicNext

PublicNext

25/05/2022 05:53 pm

Cinque Terre

63.9 K

Cinque Terre

28