ಕಾರವಾರ: ಹೆಣ್ಣು ಮಗುವಿನ ರಕ್ಷಣೆ, ಸ್ವಚ್ಛ ಭಾರತ, ರಸ್ತೆ ಸುರಕ್ಷತೆ ಹಾಗೂ ಇತರ ಸಾಮಾಜಿಕ ಜಾಗೃತಿಗಾಗಿ ಉತ್ತರ ಕನ್ನಡ ಜಿಲ್ಲೆ ಕಾರವಾರದಿಂದ ಬೆಂಗಳೂರಿನವರೆಗೆ ಸ್ಕೇಟಿಂಗ್ ರ್‍ಯಾಲಿ ಹಮ್ಮಿಕೊಳ್ಳಲಾಗಿತ್ತು.
ಮೇ 6ರಿಂದ ಮೇ 11ರವರೆಗೆ ನಡೆದ ಈ ಸ್ಕೇಟಿಂಗ್ ರ್‍ಯಾಲಿಯಲ್ಲಿ ನೂರಾರು ಸ್ಕೇಟಿಂಗ್ ಪಟುಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಇದೇ ವೇಳೆ ಕರ್ನಾಟಕ ಸರಕಾರದ ಕಾರ್ಮಿಕ ಇಲಾಖೆಯ ಪಾತ್ರ ಹಾಗೂ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು. ಕರ್ನಾಟಕ ರೋಲರ್ ಸ್ಕೇಟಿಂಗ್ ಅಕ್ಯಾಡೆಮಿ, ಕಾರ್ಮಿಕ ಇಲಾಖೆ ಹಾಗೂ ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಅಕ್ಯಾಡೆಮಿ ಸಹಯೋಗದಲ್ಲಿ ರ್‍ಯಾಲಿ ಆಯೋಜಿಸಲಾಗಿತ್ತು.
ಕಾರವಾರದಿಂದ ಆರಂಭವಾದ ರ್‍ಯಾಲಿ ಯಲ್ಲಾಪುರ, ಸಾಗರ್, ತರೀಕೆರೆ, ತಿಪ್ಟರ್, ಕುಣಿಗಲ್ ಮಾರ್ಗವಾಗಿ ಬೆಂಗಳೂರು ನಗರ ಪ್ರವೇಶಿಸಿದೆ. ನಂತರ ವಿಧಾನಸೌಧದ ಎದುರು ಸಮಾರೋಪಗೊಂಡಿದೆ. ರ್‍ಯಾಲಿಯಲ್ಲಿ ಭಾಗವಹಿಸಿದ ಮಕ್ಕಳಿಗೆ ಕಾರ್ಮಿಕ ಸಚಿವ ಅರಬೈಲ್ ಶಿವರಾಂ ಹೆಬ್ಬಾರ್ ಹಾಗೂ ಸದಸ್ಯರು ಮತ್ತು ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ ಪ್ರಧಾನ ಕಾರ್ಯದರ್ಶಿಯಾದ ಇಂಧುದರ್ ಸೀತಾರಾಂ ಸನ್ಮಾನಿಸುವ ಮೂಲಕ ಸ್ವಾಗತಿಸಿದರು .
ಈ ಸ್ಕೇಟಿಂಗ್ ರ್‍ಯಾಲಿಯಲ್ಲಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಅಕಾಡೆಮಿಯ 3 ವಿದ್ಯಾರ್ಥಿಗಳು ಭಾಗವಹಿಸಿದ್ದು
ಅವರ ಹೆಸರುಗಳು
1) ತ್ರಿಶಾ ಪಿ.ಜಡಾಲ
2) ಓಜಲ್ ಎಸ್ ನಲವಡಿ
3) ಸಂಕೇತ್ ಪಿ. ಕಡ್ಡಿ
PublicNext
19/05/2022 07:15 pm