ಬೆಂಗಳೂರು: ನಮ್ಮ ವಿದ್ಯಾರ್ಥಿಗಳು ನಮ್ಮ ಸಂಪತ್ತು. ಪೆನ್ ಹಿಡಿಯುವ ಈ ಕೈಗಳಿಗೆ ಗನ್ ಕೊಟ್ಟರೆ ಹೇಗೆ.? ಇದೇ ಒಂದು ವೇಳೆ ಅಲ್ಪಸಂಖ್ಯಾತರು ಮಾಡಿದ್ದರೇ ಕೋಲಾಹಲವೇ ಎದ್ದು ಬಿಡುತ್ತಿತ್ತು. ಬಿಜೆಪಿಗೆ ಒಂದು ನ್ಯಾಯ. ಬೇರೆಯವರಿಗೊಂದು ನ್ಯಾಯವೇ ಎಂದು ಶಾಸಕ ಜಮೀರ್ ಅಹ್ಮದ್ ಕಿಡಿಕಾರಿದ್ದಾರೆ.
ನಾವು ಏರ್ ಗನ್ ತರಬೇತಿ ನೀಡುತ್ತಿದ್ದೇವೆ. ಎಕೆ47 ತರಬೇತಿ ನೀಡುತ್ತಿಲ್ಲ ಅಂತಲೇ ಸಿಟಿ ರವಿ ಹೇಳಿಕೆ ನೀಡಿದ್ದರು. ಇದನ್ನೂ ಜಮೀರ್ ಅಹ್ಮದ್ ಟೀಕಿಸಿದ್ದಾರೆ. ಹೀಗೆ ಸಿಟಿ ರವಿ ಉಡಾಫೆ ಉತ್ತರ ಕೊಡ್ತಿರೋದು ಸರಿ ಅಲ್ಲ ಅಂತಲೇ ಜಮೀರ್ ರಿಯ್ಯಾಕ್ಟ್ ಮಾಡಿದ್ದಾರೆ.
ಕೊಡಗು ಜಿಲ್ಲೆಯ ಪೊನ್ನಾರಪೇಟೆ ಶಹರದಲ್ಲಿ ಏರ್‌ಗನ್ ತರಬೇತಿ ನಡೆದಿದೆ. ಈ ಬಗ್ಗೆ ಜಿಲ್ಲಾ ಎಸ್‌ಪಿ ಇದಕ್ಕೆ ಯಾವುದೇ ರೀತಿಯ ಅನುಮತಿ ಪಡೆಯಬೇಕಿಲ್ಲ ಅಂತಲೇ ಹೇಳಿದ್ದಾರೆ. ಇದನ್ನೂ ಜಮೀರ್ ಖಂಡಿಸಿದ್ದಾರೆ. ಕೂಡಲೇ ಎಸ್‌ಪಿಯನ್ನ ಅಮಾನಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
PublicNext
18/05/2022 07:43 am