ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬುಲ್ಡೋಜರ್ ರಾಜಕೀಯದ ಕುರಿತು ಚರ್ಚಿಸಲು ಇಂದು ಎಎಪಿ ಸಭೆ

ನವದೆಹಲಿ: ಇತ್ತೀಚೆಗೆ ಭುಗಿಲೆದ್ದಿರುವ ಬುಲ್ಡೋಜರ್‌ ರಾಜಕೀಯದ ಕುರಿತು ಚರ್ಚಿಸಲು ಸೋಮವಾರ ಆಮ್ ಆದ್ಮಿ ಪಕ್ಷವು ದೆಹಲಿ ಶಾಸಕರನ್ನು ಒಳಗೊಂಡು ಸಭೆ ನಡೆಸುತ್ತಿದೆ.

ಪಕ್ಷದ ಮುಖಂಡ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಬುಲ್ಡೋಜರ್ ರಾಜಕೀಯ ಎಎಪಿ ಮತ್ತು ಬಿಜೆಪಿ ನಡುವೆ ಹೊಸ ವಾಗ್ವಾದವನ್ನು ಉಂಟು ಮಾಡಿದೆ. ಕೇಂದ್ರ ನಾಗರಿಕ ಸಂಸ್ಥೆಗಳ ಪದಾಧಿಕಾರಿಗಳ ವಿರುದ್ಧ ತನಿಖೆ ನಡೆಸುವವರೆಗೆ ರಾಜಧಾನಿಯಲ್ಲಿ ತೆರವು ಕಾರ್ಯಾಚರಣೆಯನ್ನು ನಿಲ್ಲಿಸಬೇಕು ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸಿದ್ದಾರೆ.

ಬುಲ್ಡೋಜರ್‌ ರಾಜಕಾರಣದ ಕುರಿತು ಮೊದಲು ತುಸು ಮೌನವಾಗಿದ್ದ ಎಎಪಿ, ನಂತರ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದೆ. ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಮನೀಶ್‌ ಸಿಸೋಡಿಯಾ ಅವರು, ಬಿಜೆಪಿ ಬುಲ್ಡೋಜರ್ ರಾಜಕೀಯ ಮಾಡುತ್ತಿದ್ದು, ಇದರಿಂದ ಇಡೀ ದೆಹಲಿಯೇ ಧ್ವಂಸವಾಗಲಿದೆ ಎಂದು ಎಚ್ಚರಿಸಿದ್ದರು.

Edited By : Nagaraj Tulugeri
PublicNext

PublicNext

16/05/2022 12:59 pm

Cinque Terre

38.63 K

Cinque Terre

0

ಸಂಬಂಧಿತ ಸುದ್ದಿ