ಬೆಂಗಳೂರು: ಸ್ಯಾಂಡಲ್‌ವುಡ್ ಕ್ವೀನ್ ನಟಿ ರಮ್ಯಾ ಈಗೊಂದು ಪ್ರಶ್ನೆ ಕೇಳಿದ್ದಾರೆ. ಆ ಪ್ರಶ್ನೆಯನ್ನ ನೇರವಾಸಗಿಯೇ ಪಕ್ಷದ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೇನೆ ಕೇಳಿರೋದು ಈಗ ಅತಿ ಹೆಚ್ಚು ಗಮನ ಸೆಳೆದಿದೆ. ಬನ್ನಿ, ನೋಡೋಣ.
ಪಿಎಸ್ಐ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ ಭಾರಿ ರಾಜಕೀಯ ಪಕ್ಷಗಳಲ್ಲಿ ವಾಗ್ದಾಳಿಗಳು ನಡೀತಾನೇ ಇವೆ. ಅದರ ಮಧ್ಯೆ ಡಿಕೆಶಿವಕುಮಾರ್, ತಮ್ಮ ಪಕ್ಷದವೇ ಆದ ಎಂ.ಬಿ.ಪಾಟೀಲ್ ರ ನಡೆಯನ್ನ ಟೀಕಿಸಿದ್ದಾರೆ.
ಪಿಎಸ್‌ಐ ಅಕ್ರಮ ಹಗರಣದಲ್ಲಿ ತಮ್ಮನ್ನ ತಾವು ರಕ್ಷಿಸಿಕೊಳ್ಳಲು ಅಶ್ವಥ್ ನಾರಾಯಣ ಅವರು ಎಂ.ಬಿ.ಪಾಟೀಲರ್‌ನ್ನ ಭೇಟಿ ಹಾಕಿದ್ದಾರೆ ಎಂದು ಡಿಕೆಶಿ ಆರೋಪಿಸಿದ್ದಾರೆ.
ಇದನ್ನೇ ಗುರಿಯಾಗಿಸಿಟ್ಟುಕೊಂಡು ನಟಿ ರಮ್ಯಾ ಟ್ವಿಟ್ ಮಾಡಿದ್ದಾರೆ. ಎಂ.ಬಿ.ಪಾಟೀಲರು ನಮ್ಮ ಪಕ್ಷದ ಕಟ್ಟಾ ಕಾಂಗ್ರಿಸಿಗರು. ಅವರ ಬಗ್ಗೆ ಹೀಗೆಲ್ಲ ಹೇಳೋದು ಸರಿ ಅಲ್ಲ. ಪಕ್ಷಾತೀತವಾಗಿಯೇ ಪರಸ್ಪರ ಭೇಟಿ ಆಗೋದು ಕಾಮನ್. ಮದುವೆಗೂ ಹೋಗ್ತಾರೆ. ಪಾರ್ಟಿಗಳಲ್ಲೂ ಮೀಟ್ ಆಗ್ತಾರೆ.
ಹೀಗಿರೋವಾಗ, ಈ ರೀತಿ ಆರೋಪ ಮಾಡೋ ಬದಲು, ಮುಂದಿನ ಚುನಾವಣೆಯನ್ನ ಒಂದೇ ಘಟಕವಾಗಿಯೇ ಎದುರಿಸಬೇಕಲ್ಲವೇ ಅಂತಲೇ ಟ್ವಿಟರ್ ನಲ್ಲಿ ಪ್ರಶ್ನೆ ಕೇಳಿದ್ದಾರೆ.
PublicNext
11/05/2022 07:41 pm