ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ʼಸಾಹುಕಾರ್ʼ ಭಿಕ್ಷುಕ ಆಗ್ತಿದ್ದಾರೆ!; "ಈ ಬಗ್ಗೆ ಸಿಎಂ, ಗೃಹಸಚಿವರು ಉತ್ತರಿಸಲಿ" ಡಿಕೆಶಿ ವಾಗ್ದಾಳಿ

ಬೆಳಗಾವಿ: ʼಸಾಹುಕಾರ್ʼ ಭಿಕ್ಷುಕ ಆಗ್ತಿದ್ದಾರೆ! ಅದಕ್ಕೆ ಸಿಎಂ ಹಾಗೂ ಗೃಹಸಚಿವರು ಉತ್ತರಿಸಲಿ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ. ರಮೇಶ್ ಜಾರಕಿಹೊಳಿ ಒಡೆತನದ ʼಸೌಭಾಗ್ಯಲಕ್ಷ್ಮೀʼ ಸಹಕಾರಿ ಕಾರ್ಖಾನೆಯಲ್ಲಿ ಅವ್ಯವಹಾರವಾಗಿದೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಅವರ ಆರೋಪ ವಿಚಾರದಲ್ಲಿ ಅವರು ಮಾತನಾಡಿದರು.

ಸಾಹುಕಾರ್‌ಗಳೆಲ್ಲ ಪಾಪರ್‌ಗಳಾಗುತ್ತಿದ್ದಾರೆ, ನಮ್ಮನ್ನೆಲ್ಲ ಪಾಪರ್ ಮಾಡಿಕೊಳ್ಳಿ ಅಂತಾ ಮ್ಯಾಚ್ ಫಿಕ್ಸಿಂಗ್ ನಡೀತಿದೆ.ಸಿಎಂ ಹಾಗೂ ಸಹಕಾರ ಸಚಿವರು ಏನ್ ಮಾಡುತ್ತಿದ್ದಾರೆ? ಬಿಡಿಸಿಸಿ ಬ್ಯಾಂಕ್‌ಗೆ 300 ಕೋಟಿನೋ 600 ಕೋಟಿನೋ ? ಅದು ಎಷ್ಟು ಬರಬೇಕು ಗೊತ್ತಿಲ್ಲ. ಪೇಪರ್‌ನಲ್ಲಿ ಬಂದಿದ್ದ ಜಾಹೀರಾತು ನೋಡಿದೆ.

ನಮ್ಮ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ದಾಖಲೆ ಕಳಿಸೋದಾಗಿ ಹೇಳಿದ್ದಾರೆ. ನೋಡ್ತೀನಿ‌, ಜಿಲ್ಲಾಧಿಕಾರಿ ಏನ್ ಮಾಡ್ತಾರೆ. ಆ ಪಾಪರ್ ಸಾಹುಕಾರ್ ಭಿಕ್ಷುಕ ಆಗಿದ್ದರ ಬಗ್ಗೆ ಫಸ್ಟ್ ಸೋಮಶೇಖರ್ ಮತ್ತು ಸಿಎಂ ಉತ್ತರ ಕೊಡಲಿ. ಆಮೇಲೆ ನಾನು ಮಾತನಾಡ್ತೀನಿ ಎಂದು ಡಿ.ಕೆ.ಶಿವಕುಮಾರ್‌ ಟಾಂಗ್‌ ಕೊಟ್ಟಿದ್ದಾರೆ.

ಬೆಳಗಾವಿ ತಾಲೂಕಿನ ಅರಳಿಕಟ್ಟಿಯಲ್ಲಿ ಮಾತನಾಡಿದ ಡಿ.ಕೆ.ಶಿ., ದೆಹಲಿಯಿಂದ ಬಂದವರು ಸಿಎಂ ಮಾಡ್ತೀವಿ. 2500 ಕೋಟಿ ನೀಡಿ ಅಂತಾ ಹೇಳಿದ್ದಾರೆಂಬ ಯತ್ನಾಳ್ ಹೇಳಿಕೆ ಪ್ರಸ್ತಾಪಿಸಿ, ಯತ್ನಾಳ್ ಸಾಮಾನ್ಯ ವ್ಯಕ್ತಿಯಲ್ಲ. ಕೇಂದ್ರದ ಮಾಜಿ ಮಂತ್ರಿ, ಹಾಲಿ ಶಾಸಕರು. ಮಂತ್ರಿ ಸ್ಥಾನಕ್ಕೆ 50ರಿಂದ 100 ಕೋಟಿ ಫಿಕ್ಸ್ ಅಂತಾ ಹೇಳಿದ್ದಾರೆ. ಹಾಗಾದರೆ, ಇಂಜಿನಿಯರ್‌, ಪಿಎಸ್ಐ ಪೋಸ್ಟ್‌ಗೆ ಎಷ್ಟು ರೇಟ್ ಫಿಕ್ಸ್ ಆಗಿದೆ?

ಸಿಎಂ ಸ್ಥಾನದಿಂದ ಹಿಡಿದು, ಜವಾನ ಕೆಲಸದವರೆಗೂ ರೇಟ್ ಫಿಕ್ಸ್ ಆಗಿದೆ. 40 ಪರ್ಸೆಂಟ್ ಕಮಿಷನ್ ಫಿಕ್ಸ್ ಆಗಿದೆ. ಇದಕ್ಕಿಂತ ಇನ್ನೇನೂ ಬೇಕು? ಸಿಎಂ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ. ರಾಜ್ಯದಲ್ಲಿ ನಡೆಯುತ್ತಿರೋ ಭ್ರಷ್ಟಾಚಾರ ನಿಯಂತ್ರಿಸಲು ಆಗ್ತಿಲ್ಲ. ಅವರಿಗೆ ಯಾರ ಮೇಲೂ ಕ್ರಮ ಕೈಗೊಳ್ಳಲು ಆಗುತ್ತಿಲ್ಲ ಎಂದರು.

ʼಡಿಕೆಶಿ ಅರೆಸ್ಟ್ ಆದಾಗ, ಹೀಗಾಗಬಾರದಿತ್ತು ಹೊರಗೆ ಬರ್ತಾರೆ ಅಂತಾ ಬಿಎಸ್‌ವೈ ಹೇಳಿದ್ರುʼ ಎಂಬ ಯತ್ನಾಳ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ನನ್ನನ್ನೂ ಜೈಲಿಗೆ ಹಾಕಿದ್ರು, ಯಡಿಯೂರಪ್ಪರನ್ನೂ ಜೈಲಿಗೆ ಹಾಕಿದ್ರು, ಅಮಿತ್ ಶಾ ಅವರನ್ನೂ ಜೈಲಿಗೆ ಹಾಕಿದ್ರು. ಬೇಕಾದಷ್ಟು ಎಂಎಲ್‌ಎಗಳು, ಆನಂದ ಸಿಂಗ್‌ ರನ್ನೂ ಜೈಲಿಗೆ ಹಾಕಿದ್ರು. ಆ ಸಂದರ್ಭ ಯಡಿಯೂರಪ್ಪ ಹೇಳಿದ್ದು ನಿಜ ಎಂದರು.

ನಾನು ಎಷ್ಟು ಕೋಟಿ ಟ್ಯಾಕ್ಸ್ ಕಟ್ಟಿದ್ದೀನಿ, ನಮ್ಮ ವ್ಯವಹಾರ ಏನು? ವಹಿವಾಟು ಏನು? ಅಂತಾ ಹೇಳಲಿ. ಅವನ್ಯಾವನೋ ಸ್ಟಿಂಗ್ ಆಪರೇಷನ್ ಮಾಡೋಕೆ ಬಂದವನಿಗೆ ಸ್ವಲ್ಪ ಗಿಫ್ಟ್ ಕೊಟ್ಟು ಕಳಿಸಿಬಿಟ್ಟಿದ್ದಾರೆ. ಈಗ ಅದರ ಬಗ್ಗೆ ಚರ್ಚೆ ಮಾಡೋಕೆ ಹೋಗಲ್ಲ.ನೀವೆಲ್ಲ ಸಾಹುಕಾರ್ ಅಂತಿದ್ರಿ, ಈಗ ಪೇಪರ್‌ನಲ್ಲಿ ಅದ್ಯಾವುದೋ ಫ್ಯಾಕ್ಟರಿ ಬಗ್ಗೆ ಜಾಹೀರಾತು ಕೊಟ್ಟಿದ್ದಾರೆ.ಈ ಬಗ್ಗೆ ಸಿಎಂ ಹಾಗೂ ಗೃಹಸಚಿವರು ಉತ್ತರ ಕೊಡಲಿ ಎಂದರು ಡಿ.ಕೆ.ಶಿವಕುಮಾರ್.

Edited By : Manjunath H D
PublicNext

PublicNext

07/05/2022 07:34 pm

Cinque Terre

64.09 K

Cinque Terre

4

ಸಂಬಂಧಿತ ಸುದ್ದಿ