ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಸದ್ಯಕ್ಕೆ ಯಾವುದೇ ಪಕ್ಷವಿಲ್ಲ, ಬಿಹಾರದಲ್ಲಿ 3 ಸಾವಿರ ಕಿ.ಮೀ ಪಾದಯಾತ್ರೆಯಷ್ಟೇ'

ಪಾಟ್ನಾ: ಚುನಾವಣಾ ಪ್ರಚಾರ ತಜ್ಞ ಪ್ರಶಾಂತ್ ಕಿಶೋರ್ ಅವರು ಬಿಹಾರದಲ್ಲಿ ಸದ್ಯಕ್ಕೆ ಹೊಸ ಪಕ್ಷ ಸ್ಥಾಪನೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಅಗತ್ಯವಿದ್ದರೆ ರಾಜಕೀಯ ಪಕ್ಷದ ರೂಪುರೇಷೆಯನ್ನು ಆಗಸ್ಟ್- ಸೆಪ್ಟೆಂಬರ್‌ನಲ್ಲಿ ಜನರನ್ನು ಭೇಟಿಯಾದ ಬಳಿಕ ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.

ಇಂದು (ಗುರುವಾರ) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಹಾರದಲ್ಲಿ ಹೊಸ ವ್ಯವಸ್ಥೆ ನಿರ್ಮಿಸಲು ತಮ್ಮನ್ನು ಅರ್ಪಿಸುವುದಾಗಿ ತಿಳಿಸಿದ್ದಾರೆ. ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯನ್ನು ಜನರನ್ನು ಭೇಟಿ ಮಾಡಲು ಅಕ್ಟೋಬರ್ 2ರಿಂದ ಬಿಹಾರದಲ್ಲಿ 3 ಸಾವಿರ ಕಿಮೀ ಪಾದಯಾತ್ರೆ ನಡೆಸುವುದಾಗಿ ಹೇಳಿದ್ದಾರೆ.

"ಬಿಹಾರದಲ್ಲಿ ಸದ್ಯಕ್ಕೆ ವಿಧಾನಸಭೆ ಚುನಾವಣೆಗಳು ನಡೆಯುವುದಿಲ್ಲ. ಹೀಗಾಗಿ ಹೊಸ ರಾಜಕೀಯ ಪಕ್ಷ ಸ್ಥಾಪನೆಯು ಪ್ರಸ್ತುತ ತಮ್ಮ ಯೋಜನೆಯ ಭಾಗವಾಗಿಲ್ಲ. ಮುಂದಿನ ಮೂರು- ನಾಲ್ಕು ವರ್ಷಗಳನ್ನು ನಾನು ಜನರನ್ನು ತಲುಪುವ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತೇನೆ" ಎಂದು ತಿಳಿಸಿದ್ದಾರೆ.

"ನಾನು ಶೂನ್ಯದಿಂದ ಆರಂಭಿಸಲು ಬಯಸಿದ್ದೇನೆ. ಮುಂದಿನ ಮೂರು- ನಾಲ್ಕು ವರ್ಷಗಳನ್ನು ನಾನು ಜನ್- ಸೂರಜ್ (ಸಾರ್ವಜನಿಕ ಉತ್ತಮ ಆಡಳಿತ) ಪರಿಕಲ್ಪನೆಯೊಂದಿಗೆ ಜನರನ್ನು ತಲುಪಲು ವಿನಿಯೋಗಿಸುತ್ತೇನೆ. ಬಿಹಾರದಲ್ಲಿ 'ಹೊಸ ಆಲೋಚನೆ, ಹೊಸ ಪ್ರಯತ್ನ' ತರಲಾಗುವುದು" ಎಂದು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

05/05/2022 01:54 pm

Cinque Terre

47.1 K

Cinque Terre

4

ಸಂಬಂಧಿತ ಸುದ್ದಿ