ಹಾಸನ: 'ಒಬ್ಬ ಶಾಸಕ ಇಲ್ಲಿ ಧರಣಿ ಕುಳಿತು ನಾಲ್ಕು ತಾಸು ಕಳೆಯಿತು. ಆದರೂ ಜಿಲ್ಲಾಧಿಕಾರಿ ಆದವರು ಇಲ್ಲಿಗೆ ಬಂದಿಲ್ಲ. ಅಂದ್ರೆ ನಾನೇನು ದನ ಕಾಯೋನಾ? ಯಾವಾಗ್ಲೂ ಬಿಜೆಪಿ ಸರ್ಕಾರ ಇರುತ್ತೆ ಅಂದುಕೊಂಡಿದ್ದಾರೆ. ನಾನು ಇಂತದ್ದನ್ನೆಲ್ಲ ಇಪ್ಪತ್ತೈದು ವರ್ಷಗಳಿಂದ ನೋಡಿದ್ದೇನೆ' ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ, ಜಿಲ್ಲಾಧಿಕಾರಿ ಆರ್. ಗಿರೀಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಿಸಿ ಆಫೀಸ್ ಒಡೆದರೆ ಅದರ ಪರಿಣಾಮ ಬೇರೆ ಆಗುತ್ತೆ. ಡಿಸಿ ಸಭೆಗೆ ಹೋದರೆ ಬೆಲೆ ಕೊಡಲ್ಲ. ಜಿಲ್ಲಾಧಿಕಾರಿ ಎಷ್ಟು ದಿನ ಆಡ್ತಾನೆ ಆಡ್ಲಿ ಎಂದು ಬೇಸರ ಹೊರಹಾಕಿದರು.
ರಾತ್ರಿ ವೇಳೆ ಹಾಸನ ತಾಲೂಕು ಕಚೇರಿ ಕಟ್ಟಡ ಒಡೆದು ಹಾಕಿದ ಬಗ್ಗೆಯೂ ಅಸಮಾಧಾನ ಹೊರಹಾಕಿದ ರೇವಣ್ಣ ಅವರು, ಡಿಸಿಯವರಿಗೆ ಪುರುಸೊತ್ತಿಲ್ಲ, ರಾತ್ರಿ ವೇಳೆ ಬಿಲ್ಡಿಂಗ್ ಹೊಡೆಯುವುದರಲ್ಲಿ ಬ್ಯುಸಿ ಇದ್ದಾರೆ. ಡಿಸಿ ಅನ್ನೋ ಪದ ತೆಗೆಯಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು. ನಾನು ಒಬ್ಬ ಶಾಸಕನಾಗಿದ್ದೇನೆ. ನನಗೂ ಎರಡು ಹೋಬಳಿ ಬರುತ್ತೆ. ಕಟ್ಟಡವನ್ನು ರಾತ್ರಿ ಹೊಡೆಯುವುದಾದರೂ ಏನಿತ್ತು, ಬೆಳಗ್ಗೆ ಹೊಡಿಬೇಕಿತ್ತು. ಹೇಳೋರು, ಕೇಳೋರು ಯಾರು ಇಲ್ಲ ಇವರಿಗೆ. ಅಧಿಕಾರ ಇದೆ ಎಂದು ದರ್ಪ ತೋರಿದ್ರೆ ಹೆಚ್ಚು ದಿನ ನಡೆಯಲ್ಲ. ಪೊಲೀಸ್ ಇಲಾಖೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ ಎಂದರು.
PublicNext
05/05/2022 12:04 pm