ಗುವಾಹಟಿ: ಇಂಡಿಯನ್ ಆಯಿಲ್‌ನ ಕಾರ್ಯಕ್ರಮವೊಂದರಲ್ಲಿ ಆಕಸ್ಮಿಕವಾಗಿ ಪೋರ್ನ್ ಕ್ಲಿಪ್‌ವೊಂದು ಪ್ರಸಾರವಾದ ಘಟನೆ ಶನಿವಾರ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಅಸ್ಸಾಂ ರಾಜ್ಯದ ತೀನ್‌ಸುಕಿಯಾ ನಗರದ ಹೋಟೆಲ್ ಮಿರಾನದಲ್ಲಿ ಮಿಥನಾಲ್ ಮಿಶ್ರಿತ ಎಂ-15 ಪೆಟ್ರೋಲ್ ಅನ್ನ ಪ್ರಯೋಗಾರ್ಥವಾಗಿ ಚಾಲನೆ ಮಾಡಲಾಗಿತ್ತು. ಈ ಉದ್ಘಾಟನಾ ಕಾರ್ಯಕ್ರಮದ ವೇಳೆ ಅಶ್ಲೀಲ ವಿಡಿಯೋ ಪ್ಲೇ ಆಗಿದೆ. ಕೇಂದ್ರ ಸಚಿವರು, ರಾಜ್ಯ ಸಚಿವರು ಹಾಗೂ ಇಂಡಿಯನ್ ಆಯಿಲ್‌ನ ಹಲವು ಗಣ್ಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾಗಲೀ ಮುಜುಗರದ ಘಟನೆ ನಡೆದಿದೆ. ಈ ಸಂಬಂಧ ತನಿಖೆ ಆರಂಭವಾಗಿದೆ.
PublicNext
03/05/2022 10:15 pm