ಕೋವಿಡ್ 4 ನೇ ಅಲೆ ಹಿನ್ನೆಲೆಯಲ್ಲಿ ಇಂದು ಎಲ್ಲಾ ರಾಜ್ಯದ ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದಾರೆ.
ಈ ವೇಳೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸಂಬಂಧ ಮಾತನಾಡಿದ ಅವರು, ರಾಜ್ಯ ಸರ್ಕಾರಗಳು ತೈಲ ಮೇಲಿನ ತೆರಿಗೆಯನ್ನು (ವ್ಯಾಟ್) ಕಡಿಮೆ ಮಾಡಬೇಕು ಎಂದು ಹೇಳಿದ್ದಾರೆ.
ಕೇಂದ್ರವು ಕಳೆದ ನವೆಂಬರ್ ನಲ್ಲಿ ಇಂಧನ ಬೆಲೆ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡಿ, ತೆರಿಗೆ ಇಳಿಸಲು ರಾಜ್ಯಗಳಿಗೆ ಮನವಿ ಮಾಡಿತ್ತು. ಆಗ ಕೆಲವು ರಾಜ್ಯಗಳು ಕೇಂದ್ರದ ಮಾತಿಗೆ ಮಣಿದು ಜನರಿಗೆ ಪರಿಹಾರ ನೀಡಿದರೆ, ಕೆಲವು ರಾಜ್ಯಗಳು ಹಾಗೆ ಮಾಡಲಿಲ್ಲ ಎಂದು ಬಿಜೆಪಿಯೇತರ ರಾಜ್ಯಗಳಿಗೆ ಚಾಟಿ ಬೀಸಿದ್ದರು.
ಸದ್ಯ ವ್ಯಾಟ್ ಅನ್ನು ಕಡಿಮೆ ಮಾಡದಿರುವ ಪ್ರತಿಪಕ್ಷದ ಆಡಳಿತವಿರುವ ರಾಜ್ಯಗಳನ್ನು ಗುರಿಯಾಗಿಸಿದ ನಂತರ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿಯವರಿಗೆ ತಿರುಗೇಟು ನೀಡಿದೆ.
ಹರಿಯಾಣದ ಮಾಜಿ ಶಾಸಕ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಟ್ವೀಟ್ ಮಾಡಿದ್ದಾರೆ, “ಮೋದಿ ಜೀ, ಯಾವುದೇ ಟೀಕೆಗಳಿಲ್ಲ, ಗೊಂದಲವಿಲ್ಲ, ಸುಳ್ಳುಗಳಿಲ್ಲ! ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಬಕಾರಿ ಸುಂಕ ಲೀ.ಪೆಟ್ರೋಲ್ ಗೆ ಮೇಲೆ ರೂ 9.48 ರೂ, ಮತ್ತು ಡೀಸೆಲ್ ಲೀ. 3.56 ರೂ.ಇತ್ತು.
ಮೋದಿ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಲೀ. 27.90, ಡೀಸೆಲ್ ಲೀ. 21.80 ಏರಿಕೆಯಾಗಿದೆ ಎಂದು ತಿರುಗೇಟು ಕೊಟ್ಟಿದ್ದಾರೆ.
PublicNext
27/04/2022 08:49 pm