ಕಲಬುರಗಿ: ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಮುಸ್ಲಿಮರಿಗೆ ಬಕೆಟ್ ಹಿಡಿಯುವ ವ್ಯಕ್ತಿಯಾಗಿದ್ದು, ಅವರ ಪ್ರೇರಣೆಯಿಂದಾಗಿ ರಾಜ್ಯದಲ್ಲಿ ಇವತ್ತು ದೊಂಬಿಗಳು ಆಗುತ್ತಿವೆ ಎಂದು ಆಂದೋಲ ಶ್ರೀ ಗರಂ ಆಗಿದ್ದಾರೆ.
ಅಜಾನ್ ಮೈಕ್ ತೆರವಿಗೆ ಶ್ರೀರಾಮ್ ಸೇನೆ ಸರ್ಕಾರಕ್ಕೆ ಗಡುವು ನೀಡಿದೆ. ಈ ಬಗ್ಗೆ ವಾಗ್ದಾಳಿ ನಡೆಸಿದ್ದ ಎಚ್.ಡಿ ಕುಮಾರಸ್ವಾಮಿಗೆ ಆಂದೋಲನ ಶ್ರೀ ತೀರುಗೇಟು ನೀಡಿದ್ದು, ಮುಸ್ಲಿಮರಿಗೆ ಬೆಂಬಲ ನೀಡುವ ಇಂತಹ ರಾಜಕಾರಣಿಗಳನ್ನು ಮೊದಲು ಒಳಗಡೆ ಹಾಕಬೇಕು ಆಗಾ ಕರ್ನಾಟಕ, ಭಾರತ ಶಾಂತಿಯಿಂದ ಇರುತ್ತದೆ ಎಂದು ಕಿಡಿಕಾರಿದ್ದಾರೆ.
PublicNext
25/04/2022 08:18 am