ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿದರ ಏರಿಸಿವೆ, ಇದು ಮೋದಿ ಸರ್ಕಾರ ಜನಸಾಮಾನ್ಯರ ಮೇಲಿನ ಮತ್ತೊಂದು 'ಸರ್ಜಿಕಲ್ ಸ್ಟ್ರೈಕ್' ಈಗಾಗಲೇ ನಿರುದ್ಯೋಗ, ಬೆಲೆ ಏರಿಕೆಗಳಿಂದ ಹೈರಾಣಾದ ಜನತೆ ಸಾಲ ಮರುಪಾವತಿಗೆ ಪರದಾಡುವ ಹೊತ್ತಿನಲ್ಲಿ ಸರ್ಕಾರದ ಈ ಬಡ್ಡಿ ಬರೆಯಿಂದ ಬದುಕಲಾಗದ ಹಂತಕ್ಕೆ ತಲುಪುವುದು ನಿಶ್ಚಿತ. ಈ ಸುಲಿಗೆಯ ಹೆಸರೇ 'ಅಚ್ಛೆ ದಿನ್'! ಎಂದು ರಾಜ್ಯ ಕಾಂಗ್ರೆಸ್ ಮೋದಿ ಸರ್ಕಾರದ ವಿರುದ್ಧ ಕಿಡಿ ಕಾರಿದೆ.
ಸಾಲದ ಬಡ್ಡಿ ದರ ಏರಿಕೆ ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ ಎಂದು ಒಟ್ಟು ಜನರನ್ನು ಹಿಂಸಿಸುವುದೇ ಮೋದಿ ಸರ್ಕಾರದ ಅಚ್ಛೆ ದಿನ್ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
PublicNext
19/04/2022 10:23 pm