ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಲಭೆ, ದ್ವೇಷ ಭಾಷಣಗಳನ್ನು ನೀವೇಕೆ ಖಂಡಿಸುತ್ತಿಲ್ಲ?: ಕಾಂಗ್ರೆಸ್ ವಕ್ತಾರ ಸುರ್ಜೇವಾಲಾ ಪ್ರಶ್ನೆ

ನವದೆಹಲಿ: ವಿರೋಧ ಪಕ್ಷಗಳ ವಿರುದ್ಧ ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ವಾಗ್ದಾಳಿ ನಡೆಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ, ಗಲಭೆ, ದ್ವೇಷ ಬಾಷಣಗಳನ್ನು ನೀವೇಕೆ ಖಂಡಿಸುತ್ತಿಲ್ಲ? ಎಂದು ಪತ್ರ ಮುಖೇನ ಪ್ರಶ್ನೆ ಮಾಡಿದ್ದಾರೆ.

ಇದರೊಂದಿಗೆ ದ್ವೇಷವನ್ನು ಸೃಷ್ಟಿಸುತ್ತಿರುವ ದುಷ್ಕರ್ಮಿಗಳು ಏಕೆ ರಾಜಕೀಯ ಆಶ್ರಯ ಪಡೆಯುತ್ತಿದ್ದಾರೆ ಎಂದು ಅವರು ಕೇಳಿದ್ದಾರೆ. ಸಂವಿಧಾನ ಮತ್ತು ಅದರ ತತ್ವಗಳು ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ನಿರ್ಮಿಸಲಾದ ಸಂಸ್ಥೆಗಳ ಮೇಲೆ ಬಿಜೆಪಿ ಕೆಟ್ಟ ದಾಳಿ ನಡೆಸುತ್ತಿದೆ. ಬಿಜೆಪಿ ಮತ್ತು ಅದರ ಸರ್ಕಾರವು ತನ್ನದೇ ಆದ ಜನರೊಂದಿಗೆ ಯುದ್ಧದಲ್ಲಿದೆ ಎಂದು ಹೇಳಿದರು.

ಬಿಜೆಪಿ ಸರ್ಕಾರ ವ್ಯವಸ್ಥಿತವಾಗಿ ದೇಶದ ಸಂವಿಧಾನವನ್ನು ದುರ್ಬಲಗೊಳಿಸುತ್ತಿದೆ ಎಂದು ಸುರ್ಜೇವಾಲ ಬಹಿರಂಗ ಪತ್ರದಲ್ಲಿ ಆರೋಪಿಸಿದ್ದಾರೆ. ಬಿಜೆಪಿ ಸರ್ಕಾರ ಹಿಂಸಾಚಾರ ಮತ್ತು ದ್ವೇಷವನ್ನು ಪ್ರೋತ್ಸಾಹಿಸುತ್ತಿದೆ. ಬೆಲೆ ಏರಿಕೆ, ನಿರುದ್ಯೋಗ ಮತ್ತು ಭವಿಷ್ಯದ ಬಗ್ಗೆ ಛಿದ್ರಗೊಂಡ ಭರವಸೆಯಂತಹ ಪ್ರಮುಖ ಸಮಸ್ಯೆಗಳಿಂದ ಜನರ ಗಮನ ಬೇರೆಡೆಗೆ ತಿರುಗಿಸಲು ನೀವು ನಿಜವಾಗಿಯೂ ಹೀಗೆ ಮಾಡುತ್ತಿದ್ದೀರಿ ಎಂದು ನಡ್ಡಾ ವಿರುದ್ಧ ಸುರ್ಜೇವಾಲ ಆರೋಪಿಸಿದ್ದಾರೆ.

Edited By : Nagaraj Tulugeri
PublicNext

PublicNext

19/04/2022 08:02 am

Cinque Terre

67.75 K

Cinque Terre

8

ಸಂಬಂಧಿತ ಸುದ್ದಿ