ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ದ್ವೇಷ ತಡೆಯದಿದ್ದರೆ ದೇಶ ಉಳಿಯದು': ಪ್ರಧಾನಿ ಮೋದಿ, RSS ವಿರುದ್ಧ ಸೋನಿಯಾ ಗಾಂಧಿ ಕಿಡಿ

ನವದೆಹಲಿ: ದ್ವೇಷ ತಡೆಯದಿದ್ದರೆ ದೇಶ ಉಳಿಯದು ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್‌ಆರ್‌ಎಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

'ಫೇಸ್‌ಬುಕ್‌, ಟ್ವಿಟರ್, ಇನ್‌ಸ್ಟಾಗ್ರಾಮ್, ಟೆಲಿಗ್ರಾಮ್‌, ಗೂಗಲ್‌ನ್ಯೂಸ್‌ನಂತಹ ಡಿಜಿಟಲ್‌ ಮಾಧ್ಯಮಗಳ ಮೂಲಕ ದ್ವೇಷ, ಜನಾಂಗೀಯ ವೈಷಮ್ಯ ಮತ್ತು ಅಸಹಿಷ್ಣುತೆಯಂತಹ ಹೀನ ಗುಣಗಳನ್ನು ಹರಡುವ ಕೆಲಸ ಎಗ್ಗಿಲ್ಲದೇ ನಡೆದಿದೆ. ಇದನ್ನು ತಡೆಯದಿದ್ದರೆ ದೇಶ ಬಹುದೊಡ್ಡ ಗಂಡಾಂತರಕ್ಕೆ ಗುರಿಯಾಗಲಿದೆ' ಎಂದು ಸೋನಿಯಾ ಗಾಂಧಿ ಲೇಖನವೊಂದರಲ್ಲಿ ಎಚ್ಚರಿಸಿದ್ದಾರೆ.

'ಸಮಾಜಕ್ಕೆ ಮಾರಕ ಎನ್ನಿಸುವ ಈ ನಡವಳಿಕೆಗಳನ್ನು ತಡೆಯುವ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕು. ದ್ವೇಷ, ಅಸೂಯೆಯಂತಹ ಕಾಡ್ಗಿಚ್ಚು ವಿಸ್ತರಿಸಿದರೆ ಯಾರೂ ನೆಮ್ಮದಿಯಾಗಿ ಉಳಿಯಲಾರರು. ಪ್ರಜ್ಞಾವಂತರೆಲ್ಲರೂ ಈ ಸುನಾಮಿಯನ್ನು ತಡೆದು ನಿಲ್ಲಸಬೇಕು. ನಮ್ಮ ಹಿಂದಿನ ತಲೆಮಾರಿನ ಜನ ಕಟ್ಟಿಬೆಳೆಸಿದ ಸಹಿಷ್ಣು ಪರಂಪರೆಯನ್ನು ಉಳಿಸಿ ಬೆಳೆಸುವುದು ನಮ್ಮ ಜವಾಬ್ದಾರಿ' ಎಂದು ಹೇಳಿದ್ದಾರೆ.

Edited By : Vijay Kumar
PublicNext

PublicNext

17/04/2022 08:10 am

Cinque Terre

212.32 K

Cinque Terre

19

ಸಂಬಂಧಿತ ಸುದ್ದಿ