ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ರಾಜೀನಾಮೆ ಕೊಡ್ತೀನಿ, ಆರೋಪ ಮುಕ್ತನಾಗಿ ಬಂದೇ ಬರ್ತೀನಿ: ಈಶ್ವರಪ್ಪ

ತುಮಕೂರು: ಸಂತೋಷ್ ಆತ್ಮಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ. ಉನ್ನತ ಮಟ್ಟದ ಅಧಿಕಾರಿಗಳನ್ನು ತನಿಖೆಗಾಗಿ ನೇಮಿಸಲಾಗಿದೆ. ಕೂಲಂಕುಶವಾಗಿ ತನಿಖೆಯ ಬಳಿಕ ಸತ್ಯಾಸತ್ಯತೆ ಹೊರಗೆ ಬರಲಿದೆ. ಆಗ ಇಡೀ ದೇಶಕ್ಕೆ ಆತ್ಮಹತ್ಯೆಯ ಹಿಂದಿನ ಸತ್ಯ ತಿಳಿಯಲಿದೆ. ಸಚಿವ ಸ್ಥಾನಕ್ಕೆ ರಾಜೀನಾಮೆಯಿಂದ ನನ್ನ ರಾಜಕೀಯ ಜೀವನವೇ ಇಲ್ಲಿಗೆ ಅಂತ್ಯವಾಗಲ್ಲ ಎಂಬುದಾಗಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.

ಶಿವಮೊಗ್ಗದಿಂದ ಬೆಂಗಳೂರಿಗೆ ಆಗಮಿಸುವ ಮಾರ್ಗ ಮಧ್ಯೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದ ಬಳಿಕ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರು ಇನ್ನೂ ನಾಲ್ವರು ಸಚಿವರು ಇದರಲ್ಲಿ ಭಾಗಿಯಾಗಿದ್ದಾರೆಂದು ಹೇಳಿದ್ದಾರೆ. ಸುಮ್ಮನೇ ಆರೋಪ ಮಾಡಿದರೆ ಒಪ್ಪಲಾಗದು. ಬಾಗಿಯಾದ ಸಚಿವರ ಹೆಸರುಗಳನ್ನು ಬಹಿರಂಗಪಡಿಸಬೇಕು. ಹಾಗೂ ಅದಕ್ಕೆ ಸಮಂಜಸವಾದ ದಾಖಲೆ ಬಿಡುಗಡೆ ಮಾಡಬೇಕು. ಇಡೀ ರಾಜ್ಯದ ಜನರು ಷಡ್ಯಂತ್ರ ಎಂದು ಹೇಳುತ್ತಿದ್ದಾರೆ. ಆ ಬಗ್ಗೆ ತನಿಖೆ ನಡೆದಾಗ ಸತ್ಯ ಹೊರ ಬರಲಿದೆ. ಪ್ರತಿಪಕ್ಷ ನಾಯಕರೆಲ್ಲಾ ಕುಡಿದು ಮಾತನಾಡ್ತಾ ಇದ್ದಾರೆ. ವಿಪಕ್ಷಗಳು ಸಾಯೋವರೆಗೆ ಪ್ರತಿಭಟನೆ ಮಾಡಲಿ ಎಂಬುದಾಗಿ ವಾಗ್ದಾಳಿ ನಡೆಸಿದರು.

Edited By : Manjunath H D
PublicNext

PublicNext

15/04/2022 07:44 pm

Cinque Terre

48.18 K

Cinque Terre

9

ಸಂಬಂಧಿತ ಸುದ್ದಿ