ಮಂಡ್ಯ: ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಅವರಿಗೆ ತಮ್ಮ ಕುಟುಂಬದ್ದೇ ಚಿಂತೆ. ತಮ್ಮ ಕುಟುಂಬ ಸದಸ್ಯರ ಹೊರತಾಗಿ ಅವರಿಗೆ ಬೇರಾರೂ ಕಾಣೋದಿಲ್ಲ. ದಲಿತ ಸಿಎಂ ಮಾಡ್ತೀನಿ ಅನ್ನೋದು ಕೇವಲ ನಾಟಕ ಎಂದು ಸಚಿವ ಅಶ್ವತ್ಥನಾರಾಯಣ ಹೇಳಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಸದಾ ನಾಟಕ ಮಾಡಿಕೊಂಡೇ ಬಂದಿದ್ದಾರೆ. ಕಣ್ಣೀರು ಹಾಕುವ ನಾಟಕ ಮಾಡುತ್ತಿದ್ದ ಅವರು ಈಗ ಜಲಧಾರೆ ಎಂಬ ನಾಟಕ ಶುರುಹಚ್ಚಿಕೊಂಡಿದ್ದಾರೆ. ಎಷ್ಟೋ ಕಾರ್ಯಕರ್ತರು ಕುಮಾರಸ್ವಾಮಿ ಅವರನ್ನು ಬೆಳೆಸಿದ್ದಾರೆ. ಆದ್ರೆ ಕುಮಾರಸ್ವಾಮಿ ಅವರು ನಂಬಿಸ ಎಲ್ಲರಿಗೂ ಮೋಸ ಮಾಡಿದ್ದಾರೆ ಎಂದು ಅಶ್ವತ್ಥ ನಾರಾಯಣ ಆರೋಪಿಸಿದ್ದಾರೆ.
PublicNext
15/04/2022 06:37 pm