ಗದಗ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಗರಕ್ಕೆ ಆಗಮಿಸಿದ್ದ ಹಿನ್ನೆಲೆಯಲ್ಲಿಯೇ ಜೀರೋ ಟ್ರಾಫಿಕ್ ಕಲ್ಪಿಸಲು ಇಲ್ಲಿಯ ಸಣ್ಣ-ಪುಟ್ಟ ಅಂಗಡಿಗಳನ್ನ ಪೊಲೀಸರು ಮುಚ್ಚಿಸಿದ್ದಾರೆ. ಇದರಿಂದ ವ್ಯಾಪಾರಿಗಳು ತೀವ್ರ ಆಕ್ರೋಶವನ್ನೂ ವ್ಯಕ್ತಪಿಡಿಸಿದ್ದಾರೆ.
ನಗರದ ವಿವಿಧ ಕಾರ್ಯಕ್ರಮಗಳಿಗಾಗಿಯೇ ಸಿ.ಎಂ.ಬಸವರಾಜ್ ಬೊಮ್ಮಾಯಿ ಆಗಮಿಸಿದ್ದರು. ಇವರಿಗಾಗಿಯೇ ಇಲ್ಲಿಯ ವೀರೇಶ್ವರ ಪುಣ್ಯಾಶ್ರಮದ ಆವರಣದಲ್ಲಿ ಹೂ,ಹಣ್ಣು,ತೆಂಗಿನ ಕಾಯಿ ಮಾರಾಟದ ಅಂಗಡಿಗಳನ್ನ ಪೊಲೀಸರು ಮುಚ್ಚಿಸಿ ಬಿಟ್ಟಿದ್ದಾರೆ.
ಸಿ.ಎಂ.ಬೊಮ್ಮಾಯಿ ಇಂದು ನಗರದ ತೋಂಟದಾರ್ಯ ಲಿಂಗೈಕ್ಯ ಸಿದ್ದಲಿಂಗ ಮಹಾಸ್ವಾಮಿ ಐಕ್ಯ ಮಂಟಪದ ಕಟ್ಟಡ ಉದ್ಘಾಟಿಸಿದರು. ಪುಟ್ಟರಾಜ ಗವಾಯಿಗಳ ಪುಣ್ಯಾಶ್ರಮಕ್ಕೂ ಭೇಟಿಕೊಟ್ಟರು. ಈ ಕಾರಣಕ್ಕೇನೆ ಅಕ್ಕ-ಪಕ್ಕದ ಸಣ್ಣ-ಪುಟ್ಟ ಅಂಗಡಿಗಳನ್ನ ಬಂದ್ ಮಾಡಿಸಲಾಗಿತ್ತು. ಇದರಿಂದ ಅಂಗಡಿಯವರಿಗೂ ಹೆಚ್ಚು ಕಡಿಮೆ ನಷ್ಟವೇ ಗಿದೆ.
PublicNext
15/04/2022 05:54 pm