ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂತೋಷ್ ಪಾಟೀಲ್ ಎಂಬ ವ್ಯಕ್ತಿಗೂ ನಮಗೂ ಯಾವುದೇ ಸಂಬಂಧ ಇಲ್ಲ: ಡಾ. ವೇದಮೂರ್ತಿ

ಬೆಳಗಾವಿ: ಸಂತೋಷ್ ಪಾಟೀಲ್ ಎಂಬ ವ್ಯಕ್ತಿಗೂ ನನಗೂ ಯಾವುದೇ ಸಂಬಂಧ ಇಲ್ಲ. ಮಾಧ್ಯಮಗಳಲ್ಲಿ ಅವರೊಂದಿಗೆ ನಾನಿರುವ ಫೋಟೋಗಳು ಪ್ರಸಾರವಾಗುತ್ತಿರುವುದನ್ನು ಗಮನಿಸುತ್ತಿದ್ದೇನೆ. ಅದು ಅಚಾನಕ್ ಭೇಟಿಯಲ್ಲಿ ಅವರು ನನ್ನೊಂದಿಗೆ ತೆಗೆಸಿಕೊಂಡಿದ್ದ ಫೋಟೋ. ಅದರ ಹೊರತಾಗಿ ನನಗೆ ಸಂತೋಷ್ ಪಾಟೀಲ್ ಅವರ ಪರಿಚಯ ಇಲ್ಲ ಎಂದು ಬೈಲಹೊಂಗಲದ ಡಾ. ವೇದಮೂರ್ತಿ ಮಹಾಂತಯ್ಯ ಶಾಸ್ತ್ರಿ ಆರಾದ್ರಿಮಠ ಸ್ಪಷ್ಟನೆ ನೀಡಿದ್ದಾರೆ.

ಸಚಿವ ಈಶ್ವರಪ್ಪ ಹಾಗೂ ಸಂತೋಷ್ ಪಾಟೀಲ್ ಭೇಟಿ ವೇಳೆ ಆರಾದ್ರಿಮಠ ಫೋಟೋ ವೈರಲ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, 2021ರ ಜಾತ್ರಾ ಮಹೋತ್ಸವಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಚಾನಕ್ ಆಗಿ ಈಶ್ವರಪ್ಪ ಭೇಟಿಯಾಗಲು ಹೋಗಿದ್ದೆ. ನೀವು ಬೈಲಹೊಂಗಲ ಸ್ವಾಮೀಜಿ ಅಲ್ವಾ ಎಂದರು. ಹೌದು ಅಂದೆ. ಒಂದು ಫೋಟೋ ತೆಗೆಸಿಕೊಳ್ಳೋಣ ಅಂತಾ ಫೋಟೋ ತೆಗೆಸಿಕೊಂಡಿದ್ದೇನೆ ಎಂದರು.

ಫೋಟೋ ತೆಗೆಸಿಕೊಂಡಿರೋದು ಮಾತ್ರ ನಮಗೆ ಗೊತ್ತು. ಅದಕ್ಕಿಂತ ಪೂರ್ವದಲ್ಲಿ ಸಂತೋಷ್ ಪಾಟೀಲ್‍ಗಾಗಲಿ ನಮಗಾಗಲಿ ಭೇಟಿ, ಸಂಭಾಷಣೆ ಇಲ್ಲ. ಮಾಧ್ಯಮಗಳಲ್ಲಿ ಒನ್‍ಸೈಡ್ ಫೋಟೋ ಮಾತ್ರ ಇದೆ. ಇನ್ನೊಂದೆಡೆ ನಮ್ಮ ಪುರೋಹಿತರು ಇರುವ ಫೋಟೋ ಕಟ್ ಮಾಡಿ ಮಾಧ್ಯಮಗಳಲ್ಲಿ ತೋರಿಸುತ್ತಿದ್ದಾರೆ. ಇದಕ್ಕೂ ನಮಗೂ ಸಂಬಂಧ ಇರದ ವಿಷಯ ಎಂದು ಶ್ರೀಗಳು ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

14/04/2022 06:12 pm

Cinque Terre

36.69 K

Cinque Terre

2

ಸಂಬಂಧಿತ ಸುದ್ದಿ