ವಿಜಯಪುರ : ರಾಜ್ಯದ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬುಧವಾರ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್, “ನಾನ್ಯಾಕೆ ಮುಖ್ಯಮಂತ್ರಿಯಾಗಬಾರದು? ಈ ರಾಜ್ಯದ ಹೊಸ ನಾಯಕನಾಗುವ ಎಲ್ಲ ಸಾಮರ್ಥ್ಯ ನನಗಿದೆ. ರಾಜ್ಯದ ಮುಂದಿನ ಮುಖ್ಯಮಂತ್ರಿ ನಾನೇ. ನನ್ನ ಇಡೀ ರಾಜಕೀಯ ಜೀವನದಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪವಿಲ್ಲ” ಎಂದರು.
ಇನ್ನು “ನನ್ನ ವಿರುದ್ಧ ಅಕ್ರಮ ಆಸ್ತಿ ಗಳಿಕೆಯ ಯಾವುದೇ ಆರೋಪಗಳಿಲ್ಲ. ಯಾವುದೇ ಗಣಿಗಾರಿಕೆ ಹಗರಣದಲ್ಲೂ ನಾನು ಭಾಗಿಯಾಗಿಲ್ಲ. ಪ್ರಧಾನಿ ಮೋದಿ ಅವ್ರು ಬಯಸಿದ್ರೆ, ನನಗೆ ರಾಜ್ಯದ ಜವಾಬ್ದಾರಿ ನೀಡಬಹುದು. ಯಾಕಂದ್ರೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿಯು 130 ಸೀಟು ಗೆಲ್ಲುವಂತೆ ಮಾಡುವ ತಾಕತ್ತು ನನ್ನಲ್ಲಿದೆ. ಹೈಕಮಾಂಡ್ ನನಗೆ ನೇತೃತ್ವ ಕೊಟ್ಟರೆ ನಾನು ಚುನಾವಣೆ ಹೊಣೆಗಾರಿಕೆ ಹೊರುತ್ತೇನೆ”ಎಂದು ಹೇಳಿದರು.
PublicNext
14/04/2022 05:58 pm