ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂತೋಷ್ ಸಾವಿನ ಕಿಂಗ್ ಪಿನ್ ಡಿಕೆಶಿ! : ಕಾಳಿ ಸ್ವಾಮಿ ಆರೋಪ

ಚಿಕ್ಕಮಗಳೂರು: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಹಿಂದಿನ ಕಿಂಗ್ ಪಿನ್ ಡಿ.ಕೆ ಶಿವಕುಮಾರ್ ಏಕೆ ಆಗಿರಬಾರದು.? ಎಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಾಳಿಮಠದ ಋಷಿಕುಮಾರ ಸ್ವಾಮೀಜಿ ಸಂಶಯ ವ್ಯಕ್ತಪಡಿಸಿದ್ದಾರೆ.ಈಶ್ವರಪ್ಪರನ್ನ ಮುಗಿಸುವ ಕುತಂತ್ರವನ್ನ ಕಾಂಗ್ರೆಸ್ ರೂಪಿಸಿದೆ. ಈ ಹಿಂದೆ ಜಾರಕಿಹೊಳಿ ಪ್ರಕರಣದಲ್ಲೂ ಡಿಕೆಶಿ ಕೈವಾಡವಿತ್ತು. ಈ ಪ್ರಕರಣದಲ್ಲಿ ಡಿಕೆಶಿ ಕೈವಾಡ ಇರಬಹುದಲ್ಲವೇ ಎಂದು ಶಂಕಿಸಿದ್ದಾರೆ.

ಹೆಣ್ಣು ಮಗುವನ್ನು ಬಳಸಿಕೊಂಡು ಜಾರಕಿಹೊಳಿಯ ರಾಜೀನಾಮೆ ಪಡೆದಿದ್ರು. ಸದ್ಯ ರಾಜಕೀಯದಲ್ಲಿ ಹತಾಶರಾಗಿ ಕಾಂಗ್ರೆಸ್ ಮತ್ತು ಡಿಕೆಶಿ ಈ ರೀತಿಯ ಕೃತ್ಯಗಳನ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸಂತೋಷ್ ಸತ್ತಿರುವುದು ಉಡುಪಿಯಲ್ಲಿ, ಹಿಜಾಬ್ ವಿವಾದ ಶುರುವಾಗಿದ್ದೂ ಉಡುಪಿಯಲ್ಲಿ. ಇದರ ಹಿಂದೆ ಕಾಂಗ್ರೆಸ್ ಪಕ್ಷವಿದೆ. ಪೊಲೀಸರಿಗೆ ಶುದ್ಧ ತನಿಖೆ ಮಾಡಲು ಸರ್ಕಾರ ಬಿಟ್ಟರೆ ಒಂದೇ ದಿನದಲ್ಲಿ ಎಲ್ಲವೂ ಬಯಲಾಗುತ್ತದೆ ಎಂದು ಸ್ವಾಮಿ ಸವಾಲು ಹಾಕಿದ್ದಾರೆ.

Edited By : Nirmala Aralikatti
PublicNext

PublicNext

14/04/2022 01:48 pm

Cinque Terre

64.8 K

Cinque Terre

58

ಸಂಬಂಧಿತ ಸುದ್ದಿ